ಸಿಂಗಾಪುರ: 8 ಟನ್ ಆನೆ ದಂತಕ್ಕೆ ಬೆಂಕಿ

ಸಿಂಗಾಪುರ, ಜೂ. 13: ಎರಡು ವರ್ಷಗಳ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ಸುಮಾರು 8 ಟನ್ ಆನೆ ದಂತವನ್ನು ಸಿಂಗಾಪುರ ಸೋಮವಾರ ನಾಶಪಡಿಸಿದೆ ಹಾಗೂ ಸುಟ್ಟು ಹಾಕಿದೆ.
ದಂತ ಕಳ್ಳಸಾಗಣೆಯನ್ನು ತಡೆಯುವ ಯತ್ನವಾಗಿ ಅದು ಈ ಕ್ರಮ ತೆಗೆದುಕೊಂಡಿದೆ.
7.9 ಟನ್ ತೂಗುವ 2,700ಕ್ಕೂ ಅಧಿಕ ದಂತಗಳನ್ನು ಬಂಡೆ ಪುಡಿಮಾಡುವ ಯಂತ್ರದಲ್ಲಿ ಪುಡಿ ಮಾಡಲಾಯಿತು ಹಾಗೂ ಬಳಿಕ ದಹಿಸಲಾಯಿತು.
ವಶಪಡಿಸಿಕೊಳ್ಳಲಾಗಿರುವ ದಂತಗಳನ್ನು ಸಿಂಗಾಪುರದಲ್ಲಿ ನಾಶಪಡಿಸಿರುವುದು ಇದೇ ಮೊದಲ ಬಾರಿಯಾಗಿದೆ.
Next Story





