ಸ್ತ್ರೀ ಶಕ್ತಿ ಗುಂಪುಗಳ ಉತ್ಪನ್ನಗಳಿಗೆ ಆನ್‌ಲೈನ್ ಮಾರುಕಟ್ಟೆ: ಸಚಿವೆ ಉಮಾಶ್ರೀ
ಸ್ತ್ರೀ ಶಕ್ತಿ ಗುಂಪುಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಕಾರ್ಯಾಗಾರ

ಬೆಂಗಳೂರು, ಜೂ. 13: 'ಸ್ತ್ರೀ ಶಕ್ತಿ ಗುಂಪುಗಳು ಉತ್ಪಾದನೆ ಮಾಡುವ ವಸ್ತುಗಳಿಗೆ ಮಾರುಕಟ್ಟೆ ವಿಸ್ತರಿಸುವ ದೃಷ್ಟಿಯಿಂದ ಮೇಕ್ ಇನ್ ಇಂಡಿಯಾ ಫೌಂಡೇಷನ್ ಸಹಯೋಗದೊಂದಿಗೆ ಆನ್‌ಲೈನ್ ಮಾರುಕಟ್ಟೆಯನ್ನು ಸೃಷ್ಟಿಸಲು ಇಲಾಖೆ ಮುಂದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಸೋಮವಾರ ಬೆಂಗಳೂರಿನ ಮಡಿವಾಳದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸ್ತ್ರೀ ಶಕ್ತಿ ಭವನದಲ್ಲಿ ಸ್ತ್ರೀ ಶಕ್ತಿ ಗುಂಪುಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಕಂಪ್ಯೂಟರ್ ತರಬೇತಿ ಮತ್ತು ಆನ್‌ಲೈನ್ ಮಾರ್ಕೆಟಿಂಗ್‌ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರುಮಾತನಾಡುತ್ತಿದ್ದರು.
ಸ್ತ್ರೀ ಶಕ್ತಿ ಗುಂಪುಗಳು ಉತ್ಪಾದಿಸುವ ವಸ್ತುಗಳು ಉತ್ತಮ ಗುಣಮಟ್ಟದ್ದಾಗಿವೆ. ಇವು ಲಾಭದಾಯಕವಾಗಿ ಮುನ್ನಡೆ ಯಲು ಜಾಗತಿಕ ಮಾರುಕಟ್ಟೆ ಗುಣಲಕ್ಷಣಗಳಿಗೆ ಅನು ಗುಣವಾಗಿ ಕಾರ್ಯನಿರ್ವಹಿಸಬೇಕು. ಅದಕ್ಕಾಗಿ ಆನ್‌ಲೈನ್ ಮೂಲಕ ಈ ಉತ್ಪಾದನೆಗಳನ್ನು ಮಾರಾಟ ಮಾಡುವುದು ಅಗತ್ಯ. ಆದರೆ ಇದರ ಬಗ್ಗೆ ಸ್ತ್ರೀ ಶಕ್ತಿ ಗುಂಪು ಗಳಿಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಮೇಕ್ ಇನ್ ಇಂಡಿಯಾ ಸಹಯೋಗದೊಂದಿಗೆ ಆನ್‌ಲೈನ್ ಮಾರುಕಟ್ಟೆಯ ಬಗ್ಗೆ ಸ್ತ್ರೀ ಶಕ್ತಿ ಗುಂಪುಗಳಿಗೆ ಇನ್ನು ಮುಂದೆತರಬೇತಿ ನೀಡಲಾಗುತ್ತದೆ. ಇದರಿಂದಾಗಿ ಸ್ತ್ರೀ ಶಕ್ತಿ ಗುಂಪು ಗಳ ಮಾರುಕಟ್ಟೆ ವಿಸ್ತರಣೆ ಸಾಧ್ಯ. ಅಲ್ಲದೆ, ಜಾಗತಿಕ ಮಾರು ಕಟ್ಟೆಯ ವೇಗದೊಂದಿಗೆ ಈ ಗುಂಪುಗಳು ಸ್ಪರ್ಧಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಗಾಂಧೀಜಿ, ಗುಡಿ ಕೈಗಾರಿಕೆಯನ್ನು ಉತ್ತೇಜಿಸಬೇಕು ಅವುಗಳನ್ನು ಅಳಿಯಲು ಬಿಡಬಾರದೆಂದು ಹೇಳಿದ್ದರು. ಅದೇ ತತ್ವದ ಆಧಾರದ ಮೇಲೆ ಗುಡಿ ಕೈಗಾರಿಕೆಯ ಉತ್ಪನ್ನ ಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಕಂಡುಕೊಳ್ಳುವ ಪ್ರಯತ್ನ ನಮ್ಮದಾಗಿದೆ ಎಂದು ಅವರು ತಿಳಿಸಿದರು.
ಮಹಿಳಾ ಅಭಿವೃದ್ಧ್ದಿ ನಿಗಮದ ಮೂಲಕ ಬಡ್ಡಿರಹಿತ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಮಹಿಳೆಯರ ಗುಂಪುಗಳು ಈ ಸಾಲವನ್ನು ಸದುಪಯೋಗ ಪಡಿಸಿ ಕೊಳ್ಳಬೇಕು. ಕಷ್ಟಪಟ್ಟರೆ ಫಲ ಸಿಗುತ್ತದೆ ಎಂದು ಅವರು ಇದೇ ವೇಳೆ ಕಿವಿಮಾತು ಹೇಳಿದರು.
ಮೇಕ್ ಇನ್ ಇಂಡಿಯಾ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜು ಮಾತನಾಡಿ, ಮಹಿಳಾ ಗುಂಪುಗಳ ಉತ್ಪಾದನೆಗೆ ಒಳ್ಳೆಯ ಲಾಭ ಸಿಗಬೇಕಾದರೆ ಗ್ರಾಹಕ ಮೇಳಗಳಲ್ಲಿ ಮಹಿಳಾ ಅಭಿವೃದ್ಧಿ ಇಲಾಖೆಯಿಂದ ಪೆಲಿಯನ್ ಅನ್ನು ಖರೀದಿಸಿ ಒದಗಿಸ ಬೇಕು ಎಂದರು.
ತ್ಯಾಜ್ಯ ವಸ್ತುಗಳ ಮೂಲಕ ಆಲಂಕಾರಿಕ ಹಾಗೂ ಇತರೆ ಉತ್ಪಾದನೆಗಳುನ್ನು ಮಾಡಲು ಅವಕಾಶವಿದೆ. ಇದನ್ನು ಮಹಿಳೆಯರು ಬಳಸಿಕೊಳ್ಳಬೇಕು ಎಂದರು.
ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷೆ ವಾಸಂತಿ ಶಿವಣ್ಣ ಮಾತನಾಡಿ, ಮಹಿಳೆಯರು ನಿಗಮದಿಂದ ಕೊಡುವ ಸಾಲ ಹಾಗೂ ಇತರೆ ಕಾರ್ಯಕ್ರಮಗಳನ್ನು ಸಮರ್ಥವಾಗಿ ಬಳಸಿಕೊಂಡು ಸ್ವಾವಲಂಬಿಗಳಾಗಿ ಬದುಕಲು ತೊಡಗಬೇಕು ಎಂದರು. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮತ್ತು ಇಲಾಖಾ ನಿರ್ದೇಶಕ ವಿಜಯ ಶಂಕರ್ ಹಾಜರಿದ್ದರು.
ಪ್ರದರ್ಶನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿ ಸಿದ್ದ ಸ್ತ್ರೀ ಶಕ್ತಿ ಗುಂಪುಗಳು ತಮ್ಮ ವಿವಿಧ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದವು. ಸಚಿವೆ ಉಮಾಶ್ರೀ ಪ್ರತಿ ಪ್ರದರ್ಶನ ಮಳಿಗೆಗೆ ಭೇಟಿ ನೀಡಿ ಆ ಗುಂಪುಗಳು ಉತ್ಪಾದಿಸಿದ್ದ ವಸ್ತುಗಳನ್ನು ವೀಕ್ಷಿಸಿದರು.







