ಜುಲೈ ಮಧ್ಯಭಾಗದಲ್ಲಿ ವರ್ಷದ ಆಕ್ರೋಶ ಮಹಾ ಸಮ್ಮೇಳನ
ಕಳಸಾ ಬಂಡೂರಿ ಹೋರಾಟಕ್ಕೆ ವರ್ಷ

ಬೆಂಗಳೂರು, ಜೂ. 13:ಉತ್ತರ ಕರ್ನಾಟಕ ಭಾಗದಲ್ಲಿ ಮಹ ದಾಯಿ ಮತ್ತು ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗಾಗಿ ಆಗ್ರಹಿಸಿ ರೈತರು, ಸಂತರು ಹಾಗೂ ಹೋರಾಟಗಾರರು ನಡೆಸುತ್ತಿರುವ ಪ್ರತಿಭಟನೆ ಜು.16ಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಹೋರಾಟಕ್ಕೆ ಹೊಸ ಸ್ವರೂಪ ನೀಡಲು ಮುಂದಾಗಿರುವ ಪ್ರತಿಭಟನಾಕಾರರು 'ವರ್ಷದ ಆಕ್ರೋಶ' ಮಹಾ ಸಮ್ಮೇಳನ ನಡೆಸಲು ನಿರ್ಧರಿಸಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋ ಜಿಸಿದ್ದ ಮಹದಾಯಿ ಹಾಗೂ ಕಳಸಾ ಬಂಡೂರಿ ನದಿ ಜೋಡಣೆ ಗಾಗಿ ಹೋರಾಟದ ಪೂರ್ವಭಾವಿ ದುಂಡು ಮೇಜಿನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜು.16ರಿಂದ 20ರ ಒಳಗೆ ನರಗುಂದ ತಾಲೂಕಿನಲ್ಲಿ ರೈತರು, ಹೋರಾಟಗಾರರು ಹಾಗೂ ಸಂತರ ಬೃಹತ್ ಸಮ್ಮೇಳನ ನಡೆಸುವ ಮೂಲಕ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದೆ.
ಸಭೆಯಲ್ಲಿ ಕೇಂದ್ರ ಸರಕಾರದ ತಟಸ್ಥ ನಡೆಯನ್ನು ಸಭಿಕರು ತೀವ್ರವಾಗಿ ಖಂಡಿಸಿದರು. ನ್ಯಾಯಾಧಿಕರಣದ ಹೊರಗೆ ಕರ್ನಾಟಕ, ಗೋವಾ, ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ಪ್ರತಿ ಪಕ್ಷದ ನಾಯಕರ ಸಭೆ ಕರೆದು ಕೂಡಲೇ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆ ಹಾಗೂ ಸ್ವಾರ್ಥದಿಂದಾಗಿ ಕಳಸಾ ಬಂಡೂರಿ ಸಮಸ್ಯೆಗಳುನನೆಗುದಿಗೆ ಬಿದ್ದಿವೆ. ಕಳೆದ ಒಂದು ವರ್ಷದಿಂದ ಮಹದಾಯಿ ಹೋರಾಟ ನಡೆಯುತ್ತಿದ್ದರೂ ರಾಜಕೀಯ ನಾಯಕರು ಇತ್ತ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪ ಡಿಸಿದರು.
ಸ್ವತಂತ್ರ ಭಾರತದಲ್ಲಿ ಯಾವೊಂದು ಹೋರಾಟವೂ ಇಷ್ಟು ಸುದೀರ್ಘ ಕಾಲ ನಡೆದ ಇತಿಹಾಸವಿಲ್ಲ. ಮುಂದಿನ ತಿಂಗಳ 16ಕ್ಕೆ ಹೋರಾಟ ಆರಂಭವಾಗಿ ಒಂದು ವರ್ಷ ಪೂರ್ಣ ಗೊಳ್ಳುತ್ತಿದೆ. ಜುಲೈ 16 ರಿಂದ 20ರ ಒಳಗೆ ವರ್ಷದ ಆಕ್ರೋಶ ಬೃಹತ್ ಸಮಾವೇಶ ನಡೆಸುವ ಮೂಲಕ ಹೋರಾಟಕ್ಕೆ ಹೊಸರೂಪ ನೀಡಲು ನಿರ್ಧರಿಸಲಾಗಿದೆ ಎಂದರು.
ಜನಪ್ರತಿನಿಧಿಗಳು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮನಸ್ಸು ಮಾಡಿದ್ದರೆ ಒಂದು ದಿನದಲ್ಲಿ ಸಮಸ್ಯೆಯನ್ನು ಬಗೆಹ ರಿಸಬಹುದಿತ್ತು. ಆದರೆ ಅವುಗಳಿಗದು ಬೇಕಾಗಿಲ್ಲ. ರೈತರು, ಹೋರಾಟಗಾರರ ಸಾವಿನ ಮೇಲೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋವಾದಲ್ಲಿ ಮೀನುಗಳಿಗೆ ತೊಂದರೆಯಾಗಲಿದೆ ಎನ್ನುವ ಒಂದೇ ಒಂದು ನೆಪದಿಂದ ಈ ಯೋಜನೆಯನ್ನು ಜಾರಿಗೊಳಿಸಲುಹಿಂದೆ ಸರಿಯುತ್ತಿವೆ. ಉತ್ತರ ಕರ್ನಾಟಕದಲ್ಲಿ ಜನರು ಕುಡಿ ಯುವ ನೀರಿಲ್ಲದೆ ಸಾಯುತ್ತಿದ್ದಾರೆ. ಸರಕಾರಕ್ಕೆ ಜನರಿಗಿಂತ ಮೀನುಗಳೆ ಹೆಚ್ಚಾಯಿತೆ ಎಂದು ಕಿಡಿಕಾರಿದರು.
ಸಭೆಯಲ್ಲಿ ರೈತ ಹೋರಾಟಗಾರ ಎಂ.ಎಂ.ಮುಳ್ಳೂರು, ಸಂಚಾಲಕ ಸಂಗಮೇಶ್ ಕೊಳ್ಳಿ ಇತರರು ಉಪಸ್ಥಿತರಿದ್ದರು.
ಗೋವಾದಲ್ಲಿ ಮೀನುಗಳಿಗೆ ತೊಂದರೆಯಾಗಲಿದೆ ಎನ್ನುವ ಒಂದೇ ಒಂದು ನೆಪದಿಂದ ಈ ಯೋಜನೆಯನ್ನು ಜಾರಿಗೊಳಿಸಲು ಹಿಂದೆ ಸರಿಯುತ್ತಿವೆ. ಉತ್ತರ ಕರ್ನಾಟಕದಲ್ಲಿ ಜನರು ಕುಡಿಯುವ ನೀರಿಲ್ಲದೆ ಸಾಯುತ್ತಿದ್ದಾರೆ. ಸರಕಾರಕ್ಕೆ ಜನರಿಗಿಂತ ಮೀನುಗಳೇ ಹೆಚ್ಚಾಯಿತೇ?
-ಜಯ ಮೃತ್ಯುಂಜಯ ಸ್ವಾಮೀಜಿ







