ಹೂಹಾಕುವ ಕಲ್ಲು: ಎಸ್‌ವೈಎಸ್, ಎಸ್ಸೆಸ್ಸೆಫ್‌ನಿಂದ ರಮಝಾನ್ ಕಿಟ್ ವಿತರಣೆ

ಕೊಣಾಜೆ, ಜೂ.14: ಹೂಹಾಕುವ ಕಲ್ಲು ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ವತಿಯಿಂದ ಸುಮಾರು 3 ಕುಟುಂಬಗಳಿಗೆ ರಮಝಾನ್ ಕಿಟ್ ವಿತರಣೆ ಮತ್ತು ರಮಝಾನ್ ಅಧ್ಯಯನ ಶಿಬಿರವು ಇತ್ತೀಚೆಗೆ ಎಚ್‌ಕಲ್ನ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ರಫೀಕ್ ಅಹ್ಸನಿ ಉದ್ಘಾಟಿಸಿ, ಬಡ ಕುಟುಂಬಗಳಿಗೆ ಕಿಟ್ ವಿತರಿಸಿದರು. ಇದೇ ವೇಳೆ ನಡೆದ ರಮಝಾನ್ ಅಧ್ಯಯನ ಶಿಬಿರವನ್ನು ಸಿದ್ದೀಕ್ ಸಖಾಫಿ ಕಾಯಾರ್ ಉದ್ಘಾಟಿಸಿದರು. ಉಮರ್ ಸಖಾಫಿ ಬೇಕೂರ್ ರಮಝಾನ್ ತರಬೇತಿ ನಡೆಸಿಕೊಟ್ಟರು.
ಎಸ್‌ವೈಎಸ್ ಬ್ರಾಂಚ್ ಅಧ್ಯಕ್ಷ ಮೊಯ್ದೀನ್ ಕುಂಞಿ ತೋಟಾಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಯೂನಿಟ್ ಅಧ್ಯಕ್ಷ ರಫೀಕ್ ತಚ್ಚಾಲ್, ಸೆಕ್ಟರ್ ಮುಖಂಡ ಅಝೀಝ್ ಎಚ್.ಕೆ., ಉದ್ಯಮಿಗಳಾದ ಇಬ್ರಾಹೀಂ ತೋಟಲ್, ಅಶ್ರಫ್ ,ಸಿದ್ದೀಕ್ ಕೆಂಜಿಲ, ತಸ್ಲೀಮ್ ಆರಿಫ್, ಗ್ರಾಮ ಪಂಚಾಯತ್ ಸದಸ್ಯ ಸಿದ್ದೀಕ್ ಕೆ.ಎಚ್ ಮತ್ತಿತರರು ಉಪಸ್ಥಿತರಿದ್ದರು. ಮನಾಝಿರ್ ಮಾಸ್ಟರ್ ಸ್ವಾಗತಿಸಿ, ,ಅಬ್ದುರ್ರಝಾಕ್ ಎಚ್‌ಕಲ್ ವಂದಿಸಿದರು.
Next Story





