ಜರ್ಮನಿ: ಟರ್ಕಿ ಮೂಲದ 11 ಜರ್ಮನಿ ಸಂಸತ್ಸದಸ್ಯರಿಗೆ ಪ್ರಯಾಣ ನಿಷೇಧ!

ಬರ್ಲಿನ್, ಜೂನ್ 14: ಭದ್ರತಾ ಕಾರಣಗಳನ್ನು ಮುಂದಿಟ್ಟು ಟರ್ಕಿ ವಂಶೀಯರಾದ ಹನ್ನೊಂದು ಎಂಪಿಗಳಿಗೆ ಟರ್ಕಿ ಪ್ರಯಾಣಿಸದಂತೆ ಜರ್ಮನ್ ನಿಷೇಧ ವಿಧಿಸಿದೆ, ಇವರಿಗೆ ಪೊಲೀಸ್ ಭದ್ರತೆಯನ್ನು ಕೂಡಾಒದಗಿಸಲಾಗಿದೆ. ಒಂದನೇ ಜಾಗತಿಕ ಯುದ್ಧದ ವೇಳೆ ನಡೆದ ಸಾಮೂಹಿಕ ಕಗ್ಗೊಲೆಯನ್ನು ಜನಾಂಗೀಯ ಹತ್ಯೆ ಎಂದು ಜರ್ಮನಿ ಅಂಗೀಕರಿಸಿದ್ದರಿಂದ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿದೆ, ಆದ್ದರಿಂದ ಈ ನಿಷೇಧ ಹೇರಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ.
ಆರ್ಮೇನಿಯನ್ ಕಗ್ಗೊಲೆಯನ್ನು ಜನಾಂಗೀಯ ಹತ್ಯೆಯಾಗಿ ಪಾರ್ಲಿಮೆಂಟ್‌ನಲ್ಲಿ ಆದ್ಯಾದೇಶ ತಂದದ್ದರಿಂದ ಈ ನಿಷೇಧ ಹೇರಲಾಗಿದೆ ಎಂದು ಜರ್ಮನ್ ಮ್ಯಾಗಝಿನ್ ನಲ್ಲಿ ವರದಿಯಾಗಿದೆ, ಟರ್ಕಿಗೆ ಹೋದರೆ ಎಂಪಿಗಳ ಜೀವನ ಅಪಾಯಕಾರಿಯಾಗಲಿದೆ ಎಂದು ಜರ್ಮನಿಗೆ ಆತಂಕ ಇದೆ ಆದ್ದರಿಂದ ವಿದೇಶ ಸಚಿವಾಲಯ ಈನಿಷೇಧವನ್ನು ಹೇರಿದೆ ಎಂದು ಮ್ಯಾಗಝಿನ್ ತನ್ನ ವರದಿಯಲ್ಲಿ ತಿಳಿಸಿದೆ.
Next Story





