ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ನಕಲಿ ಚಿತ್ರ ತಯಾರಿಸಿದಾಕೆಯಿಂದ ಈಗ ಅಸಲಿ ಚೀನಾ ಭೇಟಿ

ಬೀಜಿಂಗ್, ಜೂ.14: ಕೀನ್ಯಾದ ಮಹಿಳೆ ಸೆವೆಲ್ಯನ್ ಗಾಟ್ ಅವರು ಕೆಟ್ಟ ಪೋಟೋಶಾಟ್ ಮಾಡುವಲ್ಲಿ ಕುಪ್ರಸಿದ್ಧರಾಗಿದ್ದಾರೆ. ರಜಾದಿನಗಳಲ್ಲಿ ಜಗತ್ತಿನ ಖ್ಯಾತ ಪ್ರವಾಸಿತಾಣಗಳಿಗೆ ಭೇಟಿನೀಡುವವರ ಚಿತ್ರಕ್ಕೆ ಸೆವೆಲ್ಯನ್ ಗಾಟ್ತನ್ನ ಚಿತ್ರವನ್ನು ಅಂಟಿಸಿ ತಾನೂ ಅಲ್ಲಿದ್ದೆ ಎಂದು ಬಿಂಬಿಸುವ ಪ್ರಯತ್ನಮಾಡಿದ್ದರು. ಅವರ ನಕಲಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಸಂಖ್ಯೆಯ ಜನರಿಗೆ ತಲುಪಿ ನಗಿಸಿದ್ದವು. . ಆದರೆ ಇದೀಗ ಅಸಲಿ ಚಿತ್ರಕ್ಕೆ ಸೆರೆಹಿಡಿಯಲು ಚೀನಕ್ಕೆ ಅಸಲಿ ಪ್ರಯಾಣ ಬೆಳೆಸಿದ್ದಾರೆ.
ಸೆವೆಲ್ಯನ್ ಗಾಟ್ ವಿಮಾನ ನಿಲ್ದಾಣದಲ್ಲಿ ಇರುವ ಫೋಟೊವನ್ನು ಉದ್ಯಮಿ ಸ್ಯಾಮ್ ಗಿಚೂರುಟ್ವಿಟರ್ ನಲ್ಲಿ ಹಾಕಿದ್ದಾರೆ ಎಂದು ಬಿಬಿಸಿ ವರದಿಮಾಡಿದೆ.
Seve Gats off to China pic.twitter.com/2QnDNCrfVE
— Sam Gichuru (@SamGichuru) June 13, 2016
Next Story









