ನಾಯಿಯನ್ನು ಬೈಕ್‌ನ ಹಿಂದಕ್ಕೆ ಕಟ್ಟಿ ಎಳೆದ ಕ್ರೂರಿ ಯುವಕರು!
ವಡೋದರ, ಜೂನ್ 14: ಗುಜರಾತ್‌ನ ವಡೋದರ ನಗರದಲ್ಲಿ ಇಬ್ಬರು ಯುವಕರು ನಾಯಿಯನ್ನು ಬೈಕ್ ನ ಹಿಂದಕ್ಕೆ ಕಟ್ಟಿ ಎಳೆದೊಯ್ದು ಹಿಂಸಿಸಿದ ಕ್ರೂರ ಘಟನೆ ವರದಿಯಾಗಿದೆ. ವೀಡಿಯೊದಲ್ಲಿ ಇಬ್ಬರು ಬೈಕ್ ಸವಾರರು ನಾಯಿಯನ್ನು ಬೈಕ್‌ನ ಹಿಂದಕ್ಕೆ ಕಟ್ಟಿ ಎಳೆಯುತ್ತಾ ಹೋಗುತ್ತಿದ್ದಾರೆ. ಬೈಕ್ ಕೂಡಾ ವೇಗವಾಗಿ ಚಲಿಸುತ್ತಿತ್ತು, ನಾಯಿಯ ಆಕ್ರಂದನ ಕೇಳಿ ಈ ಯುವಕರು ಅಟ್ಟಹಾಸದಿಂದ ನಗುತ್ತಿದ್ದರು ಎಂದು ವರದಿಯಾಗಿದೆ,
ಇವರ ಬೈಕ್‌ನ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಬೈಕ್‌ನಲ್ಲಿದ್ದ ಯುವಕರು ಯುವಕರ ಕ್ರೌರ್ಯದ ವೀಡಿಯೊವನ್ನು ಚಿತ್ರಿಸಿ ಪೊಲೀಸರಿಗೆ ನೀಡಿದ್ದಾರೆ. ಬೈಕ್‌ನ ನಂಬರ್ ಪ್ರಕಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇವಲ ಮೋಜಿಗಾಗಿ ಹೀಗೆ ಮಾಡಿದ್ದೇವೆಂದು ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಈ ಘಟನೆಯನ್ನು ವೀಡಿಯೊದಲ್ಲಿ ಚಿತ್ರಿಸಿದ ಯುವಕರೇ ಪಶುಚಿಕಿತ್ಸಾಲಯಕ್ಕೆ ತಂದು ನಾಯಿಗೆ ಚಿಕಿತ್ಸೆ ಕೊಡಿಸಿದ್ದಾರೆ. ನಾಯಿಯ ಬೆರಳುಗಳಿಗೆ ತೀವ್ರ ಗಾಯಗಳಾಗಿವೆ. ವನ್ಯಪ್ರೇಮಿಗಳು ಹಾಗೂ ಹಲವು ಸರಕಾರೇತರ ಸಂಸ್ಥೆಗಳು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.