Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದಿನಕ್ಕೆ 15,000 ಮಂದಿಗೆ ಊಟ ಬಡಿಸುವ...

ದಿನಕ್ಕೆ 15,000 ಮಂದಿಗೆ ಊಟ ಬಡಿಸುವ ತಿಹಾರ್ ಜೈಲಿನ ಅಡುಗೆ ಮನೆಗೊಂದು ಭೇಟಿ

ಇದು ಊಟದ ವಿಷ್ಯ

ವಾರ್ತಾಭಾರತಿವಾರ್ತಾಭಾರತಿ14 Jun 2016 4:01 PM IST
share
ದಿನಕ್ಕೆ 15,000 ಮಂದಿಗೆ ಊಟ ಬಡಿಸುವ ತಿಹಾರ್ ಜೈಲಿನ ಅಡುಗೆ ಮನೆಗೊಂದು ಭೇಟಿ

ಬಿಳಿಯುಡುಗೆ ಧರಿಸಿದ ಜನರು 200 ಕಿಲೋ ಗೋಧಿ ಹುಡಿಯಲ್ಲಿ ತ್ವರಿತವಾಗಿ 4,200 ರೋಟಿಗಳನ್ನು ತಯಾರಿಸುತ್ತಿದ್ದಾರೆ. ಬಳಿಯಲ್ಲಿಯೇ 36 ಕಿಲೋಗಳಷ್ಟು ಮಸಾಲೆಭರಿತ ಬೇಳೆ ಕಾಳುಗಳು ಕುದಿಯುತ್ತಿವೆ. ಅದನ್ನು ಆಗಾಗ್ಗೆ ಸೌಟಿನಲ್ಲಿ ಕಲಡಿಸಲಾಗುತ್ತಿದೆ. ಈ ಆಹಾರವನ್ನು ಏಷ್ಯಾದ ಅತೀ ದೊಡ್ಡ ಹಾಗೂ ಜನರಿಂದ ತುಂಬಿ ತುಳುಕುತ್ತಿರುವ ಜೈಲು ತಿಹಾರ್ ಜೈಲಿನಲ್ಲಿ ರಾತ್ರಿಯ ಭೋಜನಕ್ಕಾಗಿ ಸಿದ್ಧಪಡಿಸಲಾಗುತ್ತಿದೆ. ಆದರೆ ಆಗ ಸಮಯ ಮಧ್ಯಾಹ್ನದ 12.30 ಮತ್ತು ಆಗಷ್ಟೇ ಅಪರಾಧಿಗಳು ತಮ್ಮ ಮಧ್ಯಾಹ್ನದ ಭೋಜನ ಮುಗಿಸಿದ್ದರು. ಆದರೆ 14,348 ಮಂದಿ ಇರುವ ಜೈಲಿನ ಜನಸಂಖ್ಯೆಗೆ ಊಟ ತಯಾರಿ ಮಾತ್ರ ಬಹಳ ಬೇಗನೇ ಆರಂಭವಾಗಿಬಿಡುತ್ತದೆ. ಅಲ್ಲದೆ ತಿಹಾರ್ ಜೈಲಿನಲ್ಲಿ ಕೈದಿಗಳು ತಮ್ಮ ರಾತ್ರಿ ಭೋಜನವನ್ನು ಸಂಜೆ 6.30ಕ್ಕೇ ಮಾಡುತ್ತಾರೆ. ಲೆಸ್ಲೀ ಉಡ್ವಿನ್ ವಿವಾದದ ಬಳಿಕ ಪತ್ರಕರ್ತರಿಗೆ ತಿಹಾರ್ ಜೈಲಿಗೆ ಪ್ರವೇಶ ಸಿಗುವುದು ಕಷ್ಟವಾಗಿದೆ. ಕೆಲವು ಮಿತಿಗಳನ್ನೂ ಮಾಧ್ಯಮ ತಂಡದ ಮೇಲೆ ವಿಧಿಸಲಾಗಿದೆ. ಆದರೆ ವಿವಾದದ ಬಳಿಕ ಈಗ ಅಧಿಕಾರಿಗಳ ಸಾಮರ್ಥ್ಯಕ್ಕೆ ಹೋಲಿಸಿದರೆ ಕೈದಿಗಳ ಸಂಖ್ಯೆ ದ್ವಿಗುಣಗೊಂಡು 400 ಆಗಿದೆ. ಹೀಗಾಗಿ ಎಲ್ಲಾ 10 ಜೈಲಿನ ಸಂಕೀರ್ಣಗಳಲ್ಲಿ ಶಿಸ್ತನ್ನು ಕಾಯ್ದುಕೊಳ್ಳಲು ಬೆಳಗ್ಗಿನ 5 ಗಂಟೆಗೆ ತಯಾರಾಗುವ ಉಪಹಾರದಿಂದ ಆರಂಭವಾಗಿ ಸಮಯಕ್ಕೆ ಅನುಗುಣವಾಗಿ ನಡೆಯುತ್ತದೆ. ಬೆಳಗ್ಗಿನ ಉಪಹಾರದಲ್ಲಿ ಈಗ ವಾರಕ್ಕೆ ಎರಡು ಬಾರಿ ಅಕ್ಕಿಯ ಖೀರು ಕೂಡ ಸಿಗುತ್ತದೆ. ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯ ಆಹಾರ ತಜ್ಞರ ಸಲಹೆಯಂತೆ ವಿಶೇಷ ಆಹಾರದ ಪಟ್ಟಿಯನ್ನು ಇಲ್ಲಿ ಸಿದ್ಧಪಡಿಸಲಾಗಿದೆ. ಜೈಲು ನಂಬರ್ 2ರಲ್ಲಿ ಮಾತ್ರ ಮಧ್ಯಾಹ್ನದೂಟ ಮತ್ತು ರಾತ್ರಿಯೂಟ ತಯಾರಿಸಲು ನಾಲ್ಕು ಗಂಟೆಗಳು ಬೇಕಾಗುತ್ತವೆ ಎಂದು ತಿಹಾರ್ ಜೈಲಿನ ಕೈದಿಗಳ ಸೂಪರಿಂಟೆಂಡೆಂಟ್ ಸುನೀಲ್ ಕುಮಾರ್ ವರ್ಮಾ ಹೇಳುತ್ತಾರೆ. ಬೇಸಗೆಯಲ್ಲಿ ಅಡುಗೆಮನೆ ಬಿಸಿಯಾಗಿ ಧಗೆ ಇರುವ ಕಾರಣ ಅಡುಗೆ ತಯಾರಿ ತಡವಾಗುತ್ತದೆ. ಅಲ್ಲದೆ ಕೈದಿಗಳು ಆಗಾಗ್ಗೆ ವಿರಾಮ ತೆಗೆದುಕೊಳ್ಳುತ್ತಾರೆ. ಹೀಗಾಗಿ ಈ ಕೆಲಸವನ್ನು 22 ಮಂದಿಯ ಎರಡು ಗುಂಪುಗಳಲ್ಲಿ ಹಂಚಲಾಗಿದೆ. ಅವರು ಭೋಜನ ಸಿದ್ಧಪಡಿಸಲು ಪ್ರತ್ಯೇಕ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಜೈಲು ನಂಬರ್ 2ರಲ್ಲಿ ಸಿಹಿತಿನಿಸುಗಳನ್ನು ಸಿದ್ಧಪಡಿಸುವ ಕಾರ್ಖಾನೆಯೂ ಇದೆ. ಒಂದು ಪಫ್‌ಗಳು ಮತ್ತು ಪೇಡಗಳನ್ನು ಈ ಘಟಕದಲ್ಲಿ ಪ್ರತೀ ತಿಂಗಳು ತಯಾರಿಸಲಾಗುತ್ತದೆ. ಇದರ ಗುಣಮಟ್ಟವೂ ಅತ್ಯುತ್ತಮವಾಗಿರುವಂತೆ ಗಮನಿಸಲಾಗುತ್ತದೆ ಎನ್ನುತ್ತಾರೆ ವರ್ಮಾ. ಇಲ್ಲಿ ತಯಾರಾದ ಉತ್ಪನ್ನಗಳನ್ನು ಜೈಲಿನ ಇತರ ಭಾಗಗಳಿಗೂ ಹಂಚಲಾಗುತ್ತದೆ ಮತ್ತು ತಿಹಾರ್ ಜೈಲ್ ಉತ್ಪನ್ನಗಳೆನ್ನುವ ಬ್ರಾಂಡ್ ಹೆಸರಿನಲ್ಲಿ ಹೊರಜಗತ್ತಿಗೂ ಮಾರಲಾಗುತ್ತದೆ. ನಗರದಲ್ಲಿ 15 ರಿಟೇಲ್ ಮಳಿಗೆಗಳನ್ನು ಇದಕ್ಕಾಗಿ ತೆರೆಯಲಾಗಿದೆ.

ಎಲ್ಲಾ ಹಾಲಿನ ಉತ್ಪನ್ನಗಳು ಮತ್ತು ತರಕಾರಿಗಳನ್ನು ಮಾರಾಟಗಾರರಿಂದ ನೇರವಾಗಿ ಪಡೆದುಕೊಂಡು ತಾಜಾ ಮತ್ತು ಗುಣಮಟ್ಟವನ್ನು ನಿಭಾಯಿಸಲಾಗುತ್ತದೆ ಎನ್ನುತ್ತಾರೆ ವರ್ಮಾ. ತವಾ ಫ್ರೆಶ್ ರೋಟಿಗಳು, ದಾಲ್, ಪಲ್ಯ ಮತ್ತು ಪೇಡಾ ಇರುವ ಮಧ್ಯಾಹ್ನದ ಊಟವನ್ನೂ ಸವಿಯುವ ಅವಕಾಶ ಸಿಕ್ಕಿತು. ಅದು ಮನೆಯಲ್ಲೇ ತಯಾರಾದ ಆಹಾರದ ರುಚಿಯನ್ನು ಹೊಂದಿತ್ತು. ಹಿಂದೆ ತಿಹಾರ್ ಜೈಲಿನ ಆಹಾರದ ಬಗ್ಗೆ ಜೋಕ್ ಹರಡಿತ್ತು. ಇದನ್ನು ಒಮ್ಮೆ ತಿಂದವರು ಮತ್ತೊಮ್ಮೆ ಇಲ್ಲಿಗೆ ಬರುವುದಿಲ್ಲ ಎನ್ನಲಾಗುತ್ತಿತ್ತು ಎಂದು ವರ್ಮಾ ನೆನಪಿಸಿಕೊಂಡರು. ಆದರೆ ಈಗ ಆ ಸ್ಥಿತಿಯಿಲ್ಲ.

ಕೃಪೆ: indiatoday.intoday.in

share
ವಾರ್ತಾಭಾರತಿ
ವಾರ್ತಾಭಾರತಿ
Next Story
X