ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಬಿಎಂಡಬ್ಲ್ಯು ಕಾರು ಕೊಟ್ಟ ಕೋಚಿಂಗ್ ಸಂಸ್ಥೆ !

ಜೆಇಇ 11ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಬಿಎಂಡಬ್ಲ್ಯು ಉಡುಗೊರೆ ಕೊಟ್ಟ ರಾಜಸ್ಥಾನದ ಕೋಚಿಂಗ್ ಸಂಸ್ಥೆ
ತನ್ಮಯ ಶೇಖಾವತ್ ಯಶಸ್ಸಿನ ಹಾದಿಯನ್ನು ಪಡೆದುಕೊಳ್ಳಲು ಉತ್ತಮ ಸಂಸ್ಥೆಯನ್ನೇ ಆರಿಸಿಕೊಂಡಿದ್ದ. ಯಶಸ್ಸಿನ ಗುರಿ ತಲುಪಿದ ಮೇಲೆ ಬಿಎಂಡಬ್ಲ್ಯು ಸೆಡಾನ್ ಓಡಿಸುವ ಅವಕಾಶವೂ ಆತನಿಗೆ ಸಿಕ್ಕಿದೆ. ದೇಶದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಲ್ಲಿ ಓದಲು ಅರ್ಹತೆ ಪಡೆಯುವ ಐಐಟಿ-ಜಂಟಿ ಪ್ರವೇಶ ಪರೀಕ್ಷೆಯಲ್ಲಿ 11ನೇ ಸ್ಥಾನ ಪಡೆದ ಶೇಖಾವತ್‌ಗೆ ಆತ ಓದಿದ ರಾಜಸ್ಥಾನದ ಕೋಚಿಂಗ್ ಸಂಸ್ಥೆಯಾದ ಸಿಕಾರ್ ಈ ದುಬಾರಿ ವಾಹನವನ್ನು ಉಡುಗೊರೆಯಾಗಿ ನೀಡಿದೆ. ಐಐಟಿ ಜೆಇಇ ಪರೀಕ್ಷೆಯಲ್ಲಿ ಯಾರೇ ಆದರೂ 20ರೊಳಗಿನ ರ್ಯಾಂಕನ್ನು ಪಡೆದರೆ ಬಿಎಂಡಬ್ಲ್ಯು ಉಡುಗೊರೆಯಾಗಿ ಪಡೆಯುತ್ತಾರೆ ಎಂದು ಸಂಸ್ಥೆಯ ನಿರ್ದೇಶಕರು ಘೋಷಿಸಿದ್ದರು. ಈಗ ಅವರು ತಮ್ಮ ಆಶ್ವಾಸನೆಯನ್ನು ಈಡೇರಿಸಿದ್ದಾರೆ ಎಂದು ತನ್ಮಯ್ ಹೇಳುತ್ತಾರೆ. ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗುವ ಕನಸು ಹೊತ್ತಿದ್ದಾರೆ.
ಈ ಜರ್ಮನ್ ವಾಹನದ ಬೆಲೆ ರೂ. 27.5 ಲಕ್ಷ. ವಾಹನವನ್ನು ಎರಡು ವರ್ಷಗಳ ಹಿಂದೆ ಸಮರ್ಪಣ್ ಕೋಚಿಂಗ್ ಸಂಸ್ಥೆಯ ನಿರ್ದೇಶಕ ಡಾ.ಆರ್.ಎಲ್ ಪೂನಿಯ ಖರೀದಿಸಿದ್ದ ಕಾರಣ ಈಗಾಗಲೇ 1500 ಕಿಮೀ ಓಡಿದೆ. ರಾಜ್ಯದ ಹಲವಾರು ಕೋಚಿಂಗ್ ಸಂಸ್ಥೆಗಳಲ್ಲಿ ಉಡುಗೊರೆಗಳು ಮತ್ತು ಪ್ರಶಸ್ತಿಗಳು ಸಾಮಾನ್ಯವೇ ಆದರೂ ಮೊದಲ ಬಾರಿಗೆ ಟಾಪರ್ ಆದ ವಿದ್ಯಾರ್ಥಿ ಇಂತಹ ದುಬಾರಿ ವಾಹನ ಉಡುಗೊರೆಯಾಗಿ ಪಡೆದಿದ್ದಾರೆ.
ಈ ಉಡುಗೊರೆಯು ಚತುರ ಮಾರುಕಟ್ಟೆ ಪ್ರಚಾರವೂ ಹೌದು. ಜೈಪುರಕ್ಕೆ 115 ಕಿಮೀ ದೂರದಲ್ಲಿರುವ ಸಿಕಾರ್ ಭಾರತದ ಕೋಚಿಂಗ್ ರಾಜಧಾನಿ ಎಂದೇ ಪರಿಗಣಿಸಲಾಗಿರುವ ಕೋಟಾದ ಯಶಸ್ಸಿನ ಕತೆಯನ್ನು ನಕಲು ಮಾಡಲು ಬಯಸಿದೆ. ಕೋಟಾದ 40ಕ್ಕೂ ಅಧಿಕ ಕೋಚಿಂಗ್ ಸಂಸ್ಥೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ಮಂದಿ ಪ್ರತೀ ವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸಾಗಲೆಂದೇ ಸೇರುತ್ತಾರೆ. ಕೋಟಾದ ಕೋಚಿಂಗ್ ಉದ್ಯಮ ನೂರಾರು ಕೋಟಿಗಳಷ್ಟು ಮೌಲ್ಯ ಪಡೆದಿದೆ. ಅವುಗಳನ್ನು ಭಾರತದ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಟಾಪರ್ ಗಳನ್ನು ಸೃಷ್ಟಿಸುವ ಸ್ಥಳಗಳೆಂದೇ ಕರೆಯಲಾಗುತ್ತಿದೆ.
ಕೋಟಾದಿಂದ 260 ಕಿಮೀ ದೂರದಲ್ಲಿರುವ ಸಿಕಾರ್ ಹವೇಲಿಗಳ ನಗರ. ಇದು ಅತೀ ಪ್ರತಿಷ್ಠಿತ ಉದ್ಯಮಿಗಳ ಊರೂ ಹೌದು. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಕೋಚಿಂಗ್ ಸಂಸ್ಥೆಗಳು ಸಿಕಾರ್ ಅಲ್ಲಿ ನೆಲೆಯೂರಿವೆ. ಚುರು ಜಿಲ್ಲೆಯ ತನ್ಮಯ್ ಕಳೆದ ಎರಡು ವರ್ಷಗಳಿಂದ ಈ ಕೋಚಿಂಗ್ ಸಂಸ್ಥೆಯಲ್ಲಿ ಓದುತ್ತಿದ್ದಾನೆ. ಮೊದಲ ಬಾರಿಗೆ ಐಐಟಿ-ಜೆಇಇ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಯೊಬ್ಬರು 100ರೊಳಗಿನ ರ್ಯಾಂಕ್ ಪಡೆದಿದ್ದಾರೆ. ಕೋಟಾದಿಂದ 1 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ ನಮ್ಮ ವಿದ್ಯಾರ್ಥಿ ಅವರನ್ನೆಲ್ಲ ಹಿಂದಿಕ್ಕಿದ್ದಾನೆ ಎನ್ನುತ್ತಾರೆ ಪುನಿಯಾ. ಐಐಟಿ ಮುಂಬೈನಲ್ಲಿ ಕಂಪ್ಯೂಟರ್ ಸೈನ್ಸ್ ಕಲಿಯಲು ಬಯಸಿರುವ ತನ್ಮಯ್ ಯಶಸ್ಸಿನ ಹಿಂದೆ ತ್ಯಾಗವೂ ಇದೆ. ತನ್ಮಯನಿಗೆ ಫುಟ್ಬಾಲ್ ಮತ್ತು ಬಾಸ್ಕೆಟ್ ಬಾಲ್ ಆಡುವುದು ಇಷ್ಟ. ಸರಕಾರಿ ಶಾಲೆಯಲ್ಲಿ ಜೀವಶಾಸ್ತ್ರ ಅಧ್ಯಾಪಕರಾದ ತನ್ಮಯನ ತಂದೆ ರಾಜೇಶ್ವರ್ ಸಿಂಗ್ ಶೇಖಾವತ್ ಹೇಳುವ ಪ್ರಕಾರ, ಸಿಂಗಲ್ ರೂಂ ಬೇಕೆನ್ನುವ ಕಾರಣದಿಂದ ತನ್ಮಯ್ ಒಬ್ಬಂಟಿಯಾಗಿ ಅಡುಗೆ ಕೋಣೆಯೊಂದನ್ನೇ ಮನೆ ಮಾಡಿಕೊಂಡು ಓದುತ್ತಿದ್ದ. ತನ್ಮಯ್ ಬಹಳ ಬದ್ಧತೆಯಿಂದ ಓದಿದ್ದಾನೆ. ಕಠಿಣ ಸವಾಲುಗಳನ್ನು ಎದುರಿಸಿ ರ್ಯಾಂಕ್ ಪಡೆದಿದ್ದಾನೆ ಎಂದು ಶಾಲಾ ಅದ್ಯಾಪಕಿಯಾಗಿರುವ ತನ್ಮಯ್ ತಾಯಿ ಹೇಳುತ್ತಾರೆ.
ಈವರೆಗೆ ತನ್ಮಯ್ ಕುಟುಂಬದ ಬಳಿ ವಾಹನವಿರಲಿಲ್ಲ. ಮನೆಗೆ ಬಿಎಂಡಬ್ಲ್ಯು ತೆಗೆದುಕೊಂಡು ಹೋಗುವ ಮೊದಲು ಚಾಲನೆಯನ್ನು ಕಲಿಯುತ್ತೇನೆ ಎಂದು ತನ್ಮಯ್ ಹೇಳಿದ್ದಾರೆ.
ಕೃಪೆ: www.hindustantimes.com





