ಮೂವರಿಗೆ ಚೂರಿ ಇರಿತ, ರಷ್ಯನ್ ಪ್ರಜೆಯ ಬಂಧನ

ಪಣಜಿ,ಜೂ.14: ಉತ್ತರ ಗೋವಾದ ಬಾಗಾ ಬೀಚಿನಲ್ಲಿ ಇಂದು ಬೆಳಿಗ್ಗೆ ಪುಂಡಾಟಿಕೆಗಿಳಿದ ರಷ್ಯನ್ ಪ್ರಜೆಯೋರ್ವ ಸ್ಥಳೀಯ ಮೂವರನ್ನು ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ.
ಘಟನೆಯ ಬಳಿಕ ಆರೋಪಿ ಎಡ್ವರ್ಡ್ ಗೊರ್ಯಾಚೆವ್ ಚೂರಿಯನ್ನು ಝಳಪಿಸುತ್ತ ಬೈಕ್‌ನಲ್ಲಿ ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು ಕಲಂಗೂಟ್ ಬೀಚಿನಲ್ಲಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪಾನಮತ್ತನಾಗಿದ್ದ ಆತ ಪೊಲೀಸರು ತನ್ನನ್ನು ಸುತ್ತುವರಿದಿರುವುದನ್ನು ಕಂಡು ಸಮುದ್ರದತ್ತ ಓಡಿದ್ದನಾದರೂ ಸ್ಥಳೀಯರ ನೆರವಿನಿಂದ ಪೊಲೀಸರು ಆತನನ್ನು ನೀರಿನಿಂದ ಹೊರಕ್ಕೆ ತಂದು ಬಂಧಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story