ಕೈದಿಗೆ ಗಾಂಜಾ ಪೂರೈಕೆ: ಮಹಿಳೆಯರಿಬ್ಬರ ಬಂಧನ
ಮಂಗಳೂರು, ಜೂ. 14: ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗೆ ಗಾಂಜಾ ಪೂರೈಸಲು ಯತ್ನಿಸಿದ್ದ ಮಹಿಳೆಯರಿಬ್ಬರನ್ನು ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಉಪನಿರೀಕ್ಷಕರು ಬರ್ಕೆ ಠಾಣಾ ಪೊಲೀಸರಿಗೊಪ್ಪಿಸಿದ್ದು ಆರೋಪಿಗಳ ವಿರುದ್ಧ ಕೇಸು ದಾಖಲಾಗಿದೆ.
ಕೈದಿಯಾಗಿರುವ ಮುನೀರ್ ಎಂಬಾತನ ಸಂದರ್ಶನಕ್ಕೆ ಮಹಿಳೆ ಶಹನಾಝ್ ಮತ್ತು ಆಕೆಯ ತಾಯಿ ಫಾತಿಮಾ ಇಂದು ಕಾರಾಗೃಹಕ್ಕೆ ಬಂದಿದ್ದರು. ಶಹನಾಝ್ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್‌ನ್ನು ತಪಾಸಣೆ ನಡೆಸಿದಾಗ 17 ಗ್ರಾಂನಷ್ಟು ಗಾಂಜಾ ಹೊಂದಿರುವುದು ಪತ್ತೆಯಾಗಿದೆ.
ಕೂಡಲೇ ಗಾಂಜಾ ಸಹಿತ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದುಕೊಂಡ ಕೈಗಾರಿಕಾ ಭದ್ರತಾ ಪಡೆಯ ಉಪನಿರೀಕ್ಷಕ ಶರತ್ ಎಚ್.ಎನ್. ಬರ್ಕೆ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.
Next Story





