ಯುವತಿ ನಾಪತ್ತೆ
ಮಂಗಳೂರು, ಜೂ. 14: ಕೋಡಿಕಲ್‌ನ ನಿವಾಸಿ ಸೌಮ್ಯಾ ಸುಧಾ (18) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ತಾಯಿ ಈಶ್ವರಿ ಅವರು ಜೂನ್ 11 ರಂದು ಮತ್ತೋರ್ವ ಮಗಳಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಈ ವಿಷಯ ಗೊತ್ತಾಗಿದೆ.
ಸೌಮ್ಯಾಸುಧಾ ತಿಂಗಳ ಹಿಂದೆ ಪಾಂಡೇಶ್ವರ ಪೊಲೀಸ್ ಲೇನ್ ಸಮೀಪದ ಸಂಬಂಧಿಕರ ಮನೆಗೆ ಹೋಗುವುದಾಗಿ ತೆರಳಿದ್ದು ಇದುವರೆಗೆ ವಾಪಸ್ಸಾಗಿಲ್ಲ. ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದರೂ ಮಗಳ ಸುಳಿವಿಲ್ಲ ಎಂದು ಈಶ್ವರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





