ಕೆಲಸಕ್ಕೆ ಹೋದ ಯುವತಿ ನಾಪತ್ತೆ
ಮಂಗಳೂರು, ಜೂ.14: ಎಡಪದವು ಸಮೀಪದ ಗೇರುಬೀಜ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದ ಬೇಬಿ ಎಂಬಾಕೆಯ ಪುತ್ರಿ ಗೀತಾ (21)ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೂನ್ 13ರಂದು ಬೆಳಗ್ಗೆ ಕೆಲಸಕ್ಕೆ ಫ್ಯಾಕ್ಟರಿಗೆ ತೆರಳಿದ್ದು ಸಂಜೆ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿದ್ದಾಳೆ. ಗೋಧಿ ಮೈ ಬಣ್ಣಹೊಂದಿರುವ ಈಕೆ 5.1 ಅಡಿ ಎತ್ತರವಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Next Story





