ಜೆ.ಇ.ಇ.ಅಡ್ವಾನ್ಸ್ ಪರೀಕ್ಷೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಆಯ್ಕೆ

ಮೂಡುಬಿದಿರೆ, ಜೂ.14: ಭಾರತೀಯ ತಾಂತ್ರಿಕ ಸಂಸ್ಥೆ (ಐ.ಐ.ಟಿ)ಗೆ ಪ್ರವೇಶ ನೀಡುವ ಜೆ.ಇ.ಇ. ಅಡ್ವಾನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ತೇರ್ಗಡೆಯಾಗಿ ಐ.ಐ.ಟಿ. ಸಂಸ್ಥೆಗಳ ಪ್ರವೇಶಕ್ಕೆ ಅರ್ಹರಾಗಿರುತ್ತಾರೆ.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಕೆ. ರಾಕೇಶ್, ತಪನ್ ಕೆ.ಟಿ., ಪ್ರವೀಣ್ ನಾಯಕ್ ಎಸ್. ಎಂ., ಸಂಜ್ ಅಶೋಕ್ ಶೆಟ್ಟಿ, ಆದಿತ್ಯ ಸಿ., ಸಚಿನ್ ಮನೋಹರ್ ರನಸುಬೆ, ಸಾಗರ್ ಸಿ. ತೆನಕಟ್ಟಿ, ಡಿ. ಸೂರ್ಯ ಪ್ರಕಾಶ್ ರೆಡ್ಡಿ ಉನ್ನತ ಶ್ರೇಯಾಂಕಿತರಾಗಿದ್ದಾರೆ.
Next Story





