ಕಾಸರಗೋಡು ರಸ್ತೆ ಅಪಘಾತ: ಮೃತರ ಅಂತ್ಯಕ್ರಿಯೆ
ಕಾಸರಗೋಡು, ಜೂ.14: ಸೋಮವಾರ ಸಂಜೆ ಭೀಕರ ಅಪಘಾತದಲ್ಲಿ ಮೃತಪಟ್ಟ ಒಂದೇ ಕುಟುಂಬದ ಆರು ಮಂದಿಯ ಅಂತ್ಯಕ್ರಿಯೆ ಮಂಗಳವಾರ ನಡೆಯಿತು.
ಆರು ಮಂದಿಯ ಮೃತದೇಹಗಳನ್ನು ಚೇಟುಕುಂಡು ಬಾದುಷಾ ಜುಮಾ ಮಸೀದಿ ಅಂಗಣದಲ್ಲಿ ದಫನ ಮಾಡಲಾಯಿತು. ಸಾವಿರಾರು ಮಂದಿ ಅಂತಿಮ ನಮನ ಸಲ್ಲಿಸಿದರು.
ಪಳ್ಳಿಕೆರೆ ಸಮೀಪ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚೇಟುಕುಂಡುವಿನ ಸಕೀನಾ (40), ಪುತ್ರಿ ಸಾನಿರಾ(18), ಸಕೀನರ ಸೊಸೆ ರಂಸೀನಾ(19), ಖೈರುನ್ನಿಸಾ (31), ಪುತ್ರಿ ಫಾತಿಮಾ(2), ಸಾಜಿರ್(18) ಮೃತಪಟ್ಟಿದ್ದರು .
ಕಾಸರಗೋಡಿನ ವಿದ್ಯಾನಗರದಲ್ಲಿರುವ ಸಂಬಂಧಿಕರ ಮನೆಗೆ ಇಫ್ತಾರ್ ಕೂಟಕ್ಕೆ ಬರುತ್ತಿದ್ದಾಗ ಅಪಘಾತ ಸಂಭವಿಸಿತು.್ತ ಗಾಯಗೊಂಡು ಆಸ್ಪತ್ರೆಗೆ ದಾಖ ಲಿಸಿರುವ ಎಂಟು ತಿಂಗಳ ಇನಾಂ, ಅಜ್ಮಲ್ (5) ಮತ್ತು ಹರ್ಷಾದ್ ಚೇತರಿಸಿ ಕೊಳ್ಳುತ್ತಿದ್ದಾರೆ.
ಮೃತದೇಹಗಳನ್ನು ಕಾಂಞಗಾಡ್ ಜಿಲ್ಲಾಸ್ಪತ್ರೆ ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು. ಅಂತಿಮ ವಿಧಿವಿಧಾನ ಸಂದರ್ಭದಲ್ಲಿ ಮಂಜೇಶ್ವರ ಶಾಸಕ ಪಿ. ಬಿ. ಅಬ್ದುಲ್ ರಝಾಕ್, ಕೆ . ಕುಂಞರಾಮನ್, ಜಿಲ್ಲಾಧಿಕಾರಿ ಇ. ದೇವದಾಸನ್ ಹಾಗೂ ಇತರ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.





