ಯುಎಇ: ಒಂದು ವರ್ಷದಲ್ಲಿ 4.22 ಲಕ್ಷ ಟನ್ ಕೋಳಿ ಮಾಂಸ ಬಳಕೆ!

ಅಬುಧಾಬಿ, ಜೂನ್ 15: ದೇಶದಲ್ಲಿ ಒಂದು ವರ್ಷದಲ್ಲಿ 4.22 ಲಕ್ಷ ಟನ್ ಕೋಳಿ ಮಾಂಸವನ್ನು ಬಳಸಲಾಗುತ್ತದೆ. 320 ಕೋಟಿ ದಿರ್ಹಂ ಇದಕ್ಕೆ ವಿನಿಯೋಗವಾಗುವುದು. 2014ರ ಲೆಕ್ಕಗಳನ್ನು ಬಳಸಿ ಹಣಕಾಸು ಸಚಿವಾಲಯ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಗೃಹೋತ್ಪಾದನೆ ಮತ್ತು ಆಮದು ಮಾಡಿಕೊಂಡಿರುವುದನ್ನು ಅಧ್ಯಯನನಡೆಸಿದ ನಂತರ ದೇಶದಲ್ಲಿ ಕೋಳಿ ಮಾಂಸ ಉತ್ಪಾದನೆಗೆ ಸಂಬಂಧಿಸಿ ವರದಿಯನ್ನು ಹಣಕಾಸು ಸಚಿವಾಲಯ ಪ್ರಕಟಿಸಿದೆ. 2015ರಲ್ಲಿ ದೇಶದಲ್ಲಿ 297.7 ಕೋಟಿ ದಿರ್ಹಂನ ಕೋಳಿಮಾಂಸವನ್ನು ಆಮದು ಮಾಡಿಕೊಳ್ಳಲಾಗಿದೆ. ಕಳೆದ ಮೂರುವರ್ಷಗಳಿಗೆ ಹೋಲಿಸಿದರೆ ಶೇ.5.9ರಷ್ಟು ಹೆಚ್ಚು ಇದು. ಅದೇವೇಳೆ ಕಳೆದ ವರ್ಷ 4.09 ಕೋಟಿ ದಿರ್ಹಂನ ರಫ್ತು ಹಾಗೂ 7.95 ಕೋಟಿ ದಿರ್‌ಹಂನ ಮರು ರಫ್ತು ಆಗಿದೆ. ಇದು ಹಣಕಾಸು ಸಚಿವಾಲಯದ ಲೆಕ್ಕವಾಗಿದ್ದು, ಕಮರ್ಶಿಯಲ್ ಆ್ಯಂಡ್ ಇಂಡಸ್ಟ್ರಿಯಲ್ ಇನ್ಫಾರ್ಮೆನ್ಸ್ ಈ ಅಧ್ಯಯನವನ್ನು ನಡೆಸಿದೆ.
2014ರಲ್ಲಿ ಒಟ್ಟು ಬಳಕೆಯ ಶೇ. 11ರಷ್ಟು ಗೃಹೋತ್ಪಾದನೆಯಿತ್ತು, ಇಲ್ಲಿ ಒಟ್ಟು 24 ಕೋಳಿ ಫಾರ್ಮ್‌ಗಳು 52,000ಟನ್ ಕೋಳಿ ಮಾಂಸವನ್ನು ಉತ್ಪಾದಿಸಿದ್ದವು, 59.20ಕೋಟಿ ದಿರ್ಹಂಗೆ ಸಮಾನ ಕೋಳಿಮಾಂಸವನ್ನು ಉತ್ಪಾದಿಸಲಾಗಿತ್ತು, 2014ರ ಲೆಕ್ಕ ಪ್ರಕಾರ ಯುಎಇಯ ಒಟ್ಟು ಆಂತರಿಕ ಉತ್ಪಾದನೆಯ ಶೇ. ಒಂದರಷ್ಟು ಕೃಷಿ ಉತ್ಪಾದನೆಯಲ್ಲಿ ದೊರೆಯುತ್ತದೆ. ಆದ್ದರಿಂದ ಕೃಷಿಕ್ಷೇತ್ರಕ್ಕೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಯುಎಇಗೆ ಬ್ರೆಝಿಲ್‌ನಿಂದ ಶೇ71.5ರಷ್ಟು ಕೋಳಿಗಳನ್ನು ತರಿಸಲಾಗುತ್ತಿದೆ.





