ರಾಜ್ ಠಾಕ್ರೆಯ ಬರ್ತ್ ಡೇ ಕೇಕ್ ಗೂ ಅಸದುದ್ದೀನ್ ಉವೈಸಿಗೂ ಎಲ್ಲಿಂದೆಲ್ಲಿಯ ಸಂಬಂಧ?

ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಹುಟ್ಟುಹಬ್ಬಕ್ಕಾಗಿ ಮುಂಬೈನಲ್ಲಿ ಕತ್ತರಿಸಿದ ಕೇಕ್ ಮೇಲೆ ಆಲ್ ಇಂಡಿಯಾ ಮಜ್ಲಿಸೆ ಇ ಇತ್ತಿಹಾದುಲ್ ಮುಸ್ಲಿಮೀನ್ ಅಥವಾ ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿಯ ಚಿತ್ರವಿದ್ದದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಹೈದರಾಬಾದ್ ಮೂಲದ ಪಕ್ಷ ಎಐಎಂಐಎಂ ತೀವ್ರ ಪ್ರತಿಕ್ರಿಯೆ ನೀಡಿದೆ.
ಮಧ್ಯ ಮುಂಬೈನ ದಾದರ್‌ನ ಕೃಷ್ಣ ಕುಂಜ್ ನಿವಾಸದಲ್ಲಿ ಬೆಂಬಲಿಗರು ರಾಜ್ ಅವರನ್ನು ಸ್ವಾಗತಿಸಿ ಕೇಕ್ ಮುಂದಿಟ್ಟಿದ್ದರು. ಆ ಕೇಕ್ ಮೇಲೆ ಉವೈಸಿ ಫೋಟೋ ಇತ್ತು. ಎಐಎಂಐಎಂ ಶಾಸಕ ವಾರಿಸ್ ಪಠಾಣ್ ಈ ಕೇಕ್ ಕತ್ತರಿಸಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವರ್ಷಾರಂಭದಲ್ಲಿ ಉವೈಸಿ ಅವರು ತಮ್ಮ ಕತ್ತಿಗೆ ಚೂರಿ ಇಟ್ಟರೂ ಭಾರತ್ ಮಾತಾ ಕೀ ಜೈ ಎನ್ನುವುದಿಲ್ಲಎಂದು ಹೇಳಿ ವಿವಾದಕ್ಕೀಡಾಗಿದ್ದರು.
Next Story





