ದೇಶ ಕಟ್ಟಲು ನಿಮ್ಮ ವೀರ್ಯ ಬೇಕು!
ಯುವಜನತೆಗೆ ಚೀನಾದ ಕರೆ

ಬೀಜಿಂಗ್: ನೀವು ಚೀನಾದಲ್ಲಿ ನೆಲೆಸಿರುವ 20ರಿಂದ 45 ವರ್ಷ ವಯಸ್ಸಿನ ವ್ಯಕ್ತಿಯಾದರೆ ಸರ್ಕಾರ ನಿಮಗೊಂದು ಸಂದೇಶ ನೀಡಿದೆ. ದೇಶದ ರಕ್ಷಣೆಗೆ ನಿಮ್ಮ ವೀರ್ಯವನ್ನು ದಾನ ಮಾಡಿ.
ಚೀನಾದ ವೀರ್ಯ ಬ್ಯಾಂಕುಗಳಲ್ಲಿ ಬಹಳ ಕೊರತೆ ಕಂಡು ಬಂದಿದೆ. ಅದಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ಕಾರಣಗಳೂ ಇವೆ. ಬೆರಳೆಣಿಕೆಯ ಚೀನಾ ವ್ಯಕ್ತಿಗಳು ಮಾತ್ರ ವೀರ್ಯ ದಾನ ಮಾಡಲು ಮುಂದೆ ಬರುತ್ತಿದ್ದಾರೆ. ಅಲ್ಲದೆ ಹೀಗೆ ಸ್ವಯಂ ಆಗಿ ಮುಂದೆ ಬಂದವರಲ್ಲಿ ಹಲವರ ವೀರ್ಯ ತಿರಸ್ಕರಿಸಲಾಗಿದೆ.
ಈಗಿನ ಚೀನಾದ ನೀತಿಯು ಹೆಚ್ಚಿನ ದಂಪತಿಗಳು ಮತ್ತು ಹಿರಿಯ ದಂಪತಿಗಳಿಗೂ ಮಗು ಹೊಂದಲು ಅವಕಾಶ ನೀಡಿದೆ. ಹೀಗಾಗಿ ವೀರ್ಯ ಕೊರತೆ ಇನ್ನಷ್ಟು ಏರುವ ಸಾಧ್ಯತೆ ಇದೆ. ಹೀಗಾಗಿ ಹೊಸ ವೀರ್ಯ ಸಂಗ್ರಹಕ್ಕೆ ಸಾಧ್ಯವಾದಷ್ಟು ಪ್ರಯತ್ನ ನಡೆಯುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಯುವ ವ್ಯಕ್ತಿಗಳಿಗೆ ನಗದು ಮತ್ತು ಐಫೋನ್ ಮೊದಲಾದ ಉಡುಗೊರೆಗಳ ಆಮಿಷವನ್ನೂ ಒಡ್ಡಲಾಗುತ್ತಿದೆ. ಕೆಲವು ವೀರ್ಯ ಬ್ಯಾಂಕುಗಳು ರಾಷ್ಟ್ರಭಕ್ತಿಯನ್ನು ಮುಂದಿಟ್ಟುಕೊಂಡು ಬೇಡಿಕೆ ಇಡುತ್ತಿವೆ. ಕಾರ್ಮಿಕ ವರ್ಗ ಕಡಿಮೆಯಾಗುತ್ತಿರುವುದು ಮತ್ತು ಜನಸಂಖ್ಯೆ ವೃದ್ಧಾಪ್ಯದ ಕಡೆಗೆ ಸಾಗುತ್ತಿರುವುದನ್ನು ಅದು ತೋರಿಸಿದೆ. ಹಾಗಿದ್ದರೂ ಯುವಕರನ್ನು ಆಕರ್ಷಿಸಲು ಇಷ್ಟು ಸಾಲದಾಗಿದೆ. ಅಲ್ಲದೆ ಸಂತಾನಹೀನತೆ ಸಮಸ್ಯೆ ಹೆಚ್ಚಾಗುತ್ತಿದ್ದರೂ ಕೆಲವು ಕುಟುಂಬಗಳು ಸಂಬಂಧವಿಲ್ಲದ ವ್ಯಕ್ತಿಗಳಿಂದ ವೀರ್ಯ ಪಡೆದುಕೊಳ್ಳಲು ನಿರಾಕರಿಸುತ್ತಿವೆ. ಇದು ಮೌಲ್ಯ ವಿರೋಧಿ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಇಂತಹ ಆಳವಾಗಿ ಬೇರೂರಿದ ಅಭಿಪ್ರಾಯಗಳನ್ನು ನೀಗಿಸುವಂತಹ ಜಾಹೀರಾತುಗಳು ಇತ್ತೀಚೆಗೆ ಬರಲಾರಂಭಿಸಿವೆ. ವೀರ್ಯ ದಾನ ಮಾಡುವುದು ಮತ್ತು ರಕ್ತ ದಾನ ಮಾಡುವುದು ಒಂದೇ. ಇದು ಸಮಾಜಕ್ಕೆ ನೀವು ಋಣ ಸಂದಾಯ ಮಾಡುವುದು ಎಂದು ಬೀಜಿಂಗ್ ವೀರ್ಯ ಬ್ಯಾಂಕೊಂದು ಹೇಳಿದೆ.
ಕೃಪೆ: http://timesofindia.indiatimes.com







