ವಿರಾಟ್ ಕಂಪ್ಲೀಟ್ ಬ್ಯಾಟ್ಸ್‌ಮೆನ್: ಪಾಕ್ ಲೆಜೆಂಡ್ ಇಮ್ರಾನ್‌ಖಾನ್

ಇಸ್ಲಾಮಾಬಾದ್, ಜೂನ್ 15: ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ವಿರಾಟ್ ಕೊಹ್ಲಿಕುರಿತು ಬಹುದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಒಂದು ಸಂದರ್ಶನದಲ್ಲಿ ಮಾತಾಡುತ್ತಾ ಟೆಸ್ಟ್‌ಕ್ಯಾಪ್ಟನ್ ಕೊಹ್ಲಿಯನ್ನು ಹೊಗಳಿದ ಅವರು, ವಿರಾಟ್ ಜನ್ಮತಃ ಪರಿಪೂರ್ಣ ಬ್ಯಾಟ್ಸ್‌ಮೆನ್ ಆಗಿದ್ದಾರೆಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿರಾಟ್‌ಕೊಹ್ಲಿ ಮತ್ತು ಸಚಿನ್ ಉತ್ತಮ ಬ್ಯಾಟ್ಸ್‌ಮೆನ್‌ಗಳೇ. ಸಂಕಷ್ಟದ ಸಮಯದಲ್ಲಿ ಕೊಹ್ಲಿಯೇ ಸಚಿನ್‌ರಿಗಿಂತ ಉತ್ತಮ ಬ್ಯಾಟ್ಸ್‌ಮೆನ್. 1980ರ ವೇಳೆ ವಿವಿಯನ್ ರಿಚರ್ಡ್ಸ್ ಮತ್ತು ನಂತರ ಬ್ರಿಯಾನ್ ಲಾರ, ಆನಂತರ ಸಚಿನ್ ತೆಂಡುಲ್ಕರ್ ಸಮಯ ಬಂತು. ಆದರೆ ವಿರಾಟ್ ಇವರೆಲ್ಲರಿಗಿಂತಲೂ ಪರಿಪೂರ್ಣ ಬ್ಯಾಟ್ಸ್‌ಮೆನ್ ಆಗಿದ್ದಾರೆ ಎಂದು ಖಾನ್ ವಿಶ್ಲೇಷಿಸಿದ್ದಾರೆ. ಬ್ಯಾಟಿಂಗ್ ವೇಳೆ ವಿರಾಟ್ ಎರಡು ಕಾಲುಗಳಲ್ಲಿ ಚಲಿಸಲು ಸಮರ್ಥರಿದ್ದು ಮೈದಾನದ ಯಾವುದೆ ಮೂಲೆಗೂ ಸ್ಟ್ರೋಕ್ ಆಡಬಲ್ಲರು ಎಂದು ಹೇಳಿದ್ದಾರೆ.
ಹಲವು ಸನ್ನಿವೇಶಗಳಲ್ಲಿ ವಿರಾಟ್ ಕೊಹ್ಲಿ ಜಗತ್ತಿನ ಮಹಾನ್ ಬ್ಯಾಟ್ಸ್‌ಮೆನ್ ಸಚಿನ್ ತೆಂಡುಲ್ಕರ್‌ಗಿಂತ ಬಹಳ ಉತ್ತಮವಾಗಿ ನಿಲ್ಲುತ್ತಾರೆ. ನಾನು ನೋಡಿದ ಆಟಗಾರರಲ್ಲಿ ವಿರಾಟ್‌ಕೊಹ್ಲಿ ಪರಿಪೂರ್ಣ ಆಟಗಾರ ಆಗಿದ್ದಾರೆ. ಅವರ ಆಟದಲ್ಲಿ ವೈವಿಧ್ಯಗಳಿವೆ. ಅವರು ಎರಡೂ ಕಾಲುಗಳ ಚಲನೆಯ ಮೂಲಕ ಮೈದಾನದ ನಾಲ್ಕು ಕಡೆಗಳಲ್ಲೂ ಆಡಬಲ್ಲರು ಎಂದು ಇಮ್ರಾನ್ ಖಾನ್ ವಿರಾಟ್‌ಕೊಹ್ಲಿಯನ್ನು ಹೊಗಳಿದ್ದಾರೆ.





