ಝಿಂಬಾಬ್ವೆ ವಿರುದ್ಧ ಭಾರತಕ್ಕೆ ಸುಲಭ ಸವಾಲು
ಮೂರನೆ ಏಕದಿನ

ಹರಾರೆ, ಜೂ.15: ಝಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸುವತ್ತ ಚಿತ್ತವಿರಿಸಿರುವ ಭಾರತ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದ ಗೆಲುವಿಗೆ 124 ರನ್ ಗುರಿ ಪಡೆದಿದೆ.
ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಬುಧವಾರ ನಡೆದ ಮೂರನೆ ಏಕದಿನ ಪಂದ್ಯದಲ್ಲಿ ಸತತ ಮೂರನೆ ಬಾರಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಝಿಂಬಾಬ್ವೆ 42.2 ಓವರ್‌ಗಳಲ್ಲಿ ಕೇವಲ 123 ರನ್‌ಗೆ ಆಲೌಟಾಯಿತು.
ಝಿಂಬಾಬ್ವೆಯ ಬ್ಯಾಟಿಂಗ್‌ನಲ್ಲಿ ವಿಸು ಸಿಬಾಂಡ(38 ರನ್) ಅಗ್ರ ಸ್ಕೋರರ್ ಎನಿಸಿಕೊಂಡರೆ, ಚಿಭಾಭಾ(27) ಹಾಗೂ ಮರುಮಾ(17) ಎರಡಂಕೆಯ ಸ್ಕೋರ್ ದಾಖಲಿಸಿದರು. ಉಳಿದವರು ಪೆವಿಲಿಯನ್‌ಗೆ ಪರೇಡ್ ನಡೆಸಿದರು.
ಆತಿಥೇಯ ಝಿಂಬಾಬ್ವೆ ತಂಡ ಭಾರತದ ಎಡಗೈ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ(4-22) ದಾಳಿಗೆ ನಿರುತ್ತರವಾಯಿತು. ಸ್ಪಿನ್ನರ್ ಯುಝ್ವೇಂದ್ರ ಚಾಹಲ್(2-25) ಎರಡು ವಿಕೆಟ್ ಪಡೆದರು.
ಸತತ ಮೂರನೆ ಪಂದ್ಯದಲ್ಲೂ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿರುವ ಝಿಂಬಾಬ್ವೆ ಸರಣಿಯನ್ನು 3-0 ಅಂತರದಿಂದ ಸೋತು ಕ್ಲೀನ್‌ಸ್ವೀಪ್‌ಗೆ ಒಳಗಾಗುವ ಭೀತಿಯಲ್ಲಿದೆ.





