ಬುರ್ಖಾ ಧರಿಸಿ ಮುಸ್ಲಿಂ ವೇಷಧಾರಿಯಾಗಿ ಭಿಕ್ಷಾಟನೆ: ಮಹಿಳೆ ಸೆರೆ
-L.jpg)
ಕಡಬ, ಜೂ.15: ಬುರ್ಖಾ ಧರಿಸಿ ಭಿಕ್ಷಾಟನೆಗೈದು ತದನಂತರ ಬುರ್ಖಾವನ್ನು ಬಿಚ್ಚಿಡುವುದನ್ನು ನೋಡಿದ ಸ್ಥಳೀಯರು ಮಹಿಳೆಯೋರ್ವರನ್ನು ಕಡಬ ಪೊಲೀಸರ ವಶಕ್ಕೊಪ್ಪಿಸಿದ ಘಟನೆ ಬುಧವಾರ ಸಂಜೆ ಕಡಬ ಪೇಟೆಯಲ್ಲಿ ನಡೆದಿದೆ.
ಹಾಸನ ಮೂಲದ ಪುಷ್ಪಾಎಂಬಾಕೆ ತನ್ನ ಇಬ್ಬರು ಮಕ್ಕಳೊಂದಿಗೆ ಕಡಬ ಪೇಟೆಯಾದ್ಯಂತ ಕಳೆದೆರಡು ದಿನಗಳಿಂದ ಭಿಕ್ಷಾಟನೆಗೈದು ಬಸ್ಸು ನಿಲ್ದಾಣದ ಸಮೀಪ ಬುರ್ಖಾವನ್ನು ಕಳಚುತ್ತಿದ್ದ ಸಂದರ್ಭ ಊರವರು ನೋಡಿ ವಿಚಾರಿಸಿದ್ದು, ಕಡಬ ಠಾಣೆಗೆ ದೂರು ನೀಡಿದ್ದರು.
ಮುಸ್ಲಿಂ ವೇಷಧಾರಿಯಾಗಿ ಭಿಕ್ಷಾಟನೆಗೈಯುತ್ತಿದ್ದ ಆರೋಪದಲ್ಲಿ ಕಡಬ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮೂರ್ನಾಲ್ಕು ಮಹಿಳೆಯರು ಒಟ್ಟಿಗೆ ಆಗಮಿಸಿ ಭಿಕ್ಷಾಟನೆ ಮಾಡುತ್ತಿದ್ದು, ಎಲ್ಲರೂ ವಿವಿಧ ಕಡೆಗಳಿಗೆ ತೆರಳಿದ್ದಾರೆ ಎನ್ನಲಾಗಿದೆ.
Next Story





