‘ಶಿಕ್ಷಣ, ಆರೋಗ್ಯ, ಕುಡಿಯುವ ನೀರಿಗೆ ಸರಕಾರ ವಿಶೇಷ ಗಮನಹರಿಸಿದೆ’
ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ
ಶಿಕಾರಿಪುರ, ಜೂ.15: ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧ್ದಿಗೆ ಕ್ರಮ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನೂತನ ಶಾಲೆ, ಕಾಲೇಜು, ಹಾಸ್ಟೆಲ್, ರಸ್ತೆ ಜೊತೆಗೆ ಇದೀಗ ಸುಸಜ್ಜಿತಆಸ್ಪತ್ರೆಯ ಮೂಲಕ ಗ್ರಾಮೀಣ ಜನತೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಶಾಸಕ ರಾಘವೇಂದ್ರ ತಿಳಿಸಿದರು.
ಬುಧವಾರ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಆರೋಗ್ಯ ಪದ್ಧತಿ ಅಭಿವೃದ್ಧ್ದಿ ಮತ್ತು ಸುಧಾರಣಾ ಯೋಜನೆ ವತಿಯಿಂದ ನಿರ್ಮಾಣವಾದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಕೋಟ್ಯಂತರ ರೂ. ವೆಚ್ಚದ ನೂತನ ಆಸ್ಪತ್ರೆಯ ಸಹಿತ ಸರ್ವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಕಾಣದಂತೆ ಎಚ್ಚರಿಕೆಯನ್ನು ಇಲಾಖೆ ವಹಿಸಬೇಕಾಗಿದೆ. ವೈದ್ಯರಿಗೆ ನೋವಾಗದ ರೀತಿಯಲ್ಲಿ ಜನತೆ ವರ್ತಿಸಿ ಉತ್ತಮ ಸೇವೆಯನ್ನು ಪಡೆದಾಗ ಮಾತ್ರ ಯಡಿಯೂರಪ್ಪನವರ ಶ್ರಮ ಸಾರ್ಥಕವಾಗಲಿದೆ ಎಂದರು.
ವಿಧಾನಪರಿಷತ್ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರಿಗಾಗಿ ರಾಜ್ಯ ಸರಕಾರ ವಿಶೇಷ ಗಮನಹರಿಸಿದ್ದು ಸರ್ವರಿಗೂ ಆರೋಗ್ಯಭಾಗ್ಯಕ್ಕಾಗಿ ಆರೋಗ್ಯ ಸಚಿವ ಖಾದರ್ ಹೆಚ್ಚು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಗುತ್ತಿಗೆ ಆಧಾರದಲ್ಲಿ ಖಾಲಿ ವೈದ್ಯ ಸಿಬ್ಬಂದಿ ಹುದ್ದೆಯ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು,್ದ ಹರೀಶ್ ಸಾಂತ್ವನ ಯೋಜನೆ ಮೂಲಕ ಅಪಘಾತವಾದಲ್ಲಿ ಕೂಡಲೇ 25 ಸಾವಿರ ರೂ. ಚಿಕಿತ್ಸೆಗೆ ನೀಡಲಾಗುತ್ತಿದೆ ಎಂದರು.
ವೈದ್ಯರು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡದಂತೆ ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ ದೊರಕಿಸುವಂತೆ ಸೂಚಿಸಿದ ಅವರು ಸ್ಥಳದಲ್ಲಿಯೇ ವಾಸಿಸುವ ಮೂಲಕ ಉತ್ತಮ ಸೇವೆ ಗುರಿಯಾಗಬೇಕು ಎಂದರು.
ಕಾಡಾ ಅಧ್ಯಕ್ಷ ನಗರದ ಮಹಾದೇವಪ್ಪ ಮಾತನಾಡಿದರು. ಜಿಪಂ ಅಧ್ಯಕ್ಷೆ ಜ್ಯೋತಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಾದ ಸೌಲಭ್ಯ ಕಲ್ಪಿಸಲು ಸಿದ್ದರಿರುವುದಾಗಿ ತಿಳಿಸಿದರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಆಶಾ ವಹಿಸಿ ಮಾತನಾಡಿದರು. ಗಣ್ಯರನ್ನು ಸನ್ಮಾನಿಸಲಾಯಿತು. ಜಿಪಂ ಉಪಾಧ್ಯಕ್ಷೆ ವೇದಾ, ಸದಸ್ಯೆ ಅರುಂದತಿ, ತಾಪಂ ಅಧ್ಯಕ್ಷ ಪರಮೇಶ್ವರಪ್ಪ, ಉಪಾಧ್ಯಕ್ಷೆ ರೂಪಾ, ಸದಸ್ಯ ಸುರೇಶನಾಯ್ಕ, ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್, ತಾಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ, ಡಾ.ಹರ್ಷವರ್ಧನ್, ಡಾ. ಅಶೋಕ್, ಡಾ. ದುಷ್ಯಂತ್, ಪಾಂಡು, ಅಶೋಕ್, ವೈ.ಎಂ ಪೂಜಾರ್, ಪಾರ್ವತಮ್ಮ, ಸುರೇಶ್ ಶೆಟ್ಟಿ ಮುಖಂಡ ವಸಂತಗೌಡ ಮತ್ತಿತರರು ಉಪಸ್ಥಿತರಿದ್ದರು.







