ಕೂಪನ್ ಮೂಲಕ ಸೀಮೆಎಣ್ಣೆ ವಿತರಣೆಗೆ ಕ್ರಮ
ಮಡಿಕೇರಿ, ಜೂ.15: ನಗರದ 8 ನ್ಯಾಯಬೆಲೆ ಅಂಗಡಿಗಳಲ್ಲಿ ಜೂನ್ ತಿಂಗಳಿನಿಂದ ನಗರ ವ್ಯಾಪ್ತಿಯ ಅನಿಲರಹಿತ ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆಯನ್ನು ಕೂಪನ್ ಮೂಲಕ ವಿತರಿಸಲು ಕ್ರಮಕೈಗೊಳ್ಳಲಾಗಿದೆ.
ನಗರ ವ್ಯಾಪ್ತಿಯ ಎಲ್ಲ ಅನಿಲರಹಿತ ಪಡಿತರ ಚೀಟಿದಾರರು ಜೂ. 15ರಿಂದ 19ರ ಒಳಗೆ ನಗರದ ನಗರಸಭೆೆ ಕಟ್ಟಡದ ಕವನ್ ಎಂಟರ್ ಪ್ರೈಸಸ್ ಮತ್ತು ಮಹದೇವಪೇಟೆಯ ಆಲಿಯಾ ಕಾಂಪ್ಲೆಕ್ಸ್‌ನಲ್ಲಿ ಸೀಮೆಎಣ್ಣೆ ಕೂಪನ್ ಪಡೆದು ತಮ್ಮ, ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ನೀಡಿ ನಿಗದಿಪಡಿಸಿದ ದರದಲ್ಲಿ ನಿಗದಿತ ಪ್ರಮಾಣದ ಸೀಮೆಎಣ್ಣೆ ಪಡೆಯಬಹುದಾಗಿದೆ. (ಜೂನ್ 20ರ ಒಳಗೆ ಕೂಪನ್‌ಗಳನ್ನು ಪಡೆದು ಸದುಪಯೋಗವನ್ನು ಪಡೆದುಕೊಳ್ಳಬಹುದು). ಕೂಪನ್ ಪಡೆಯುವ ವಿಧಾನ ಇಂತಿದೆ:- SAHCSL ನೋಂದಾಯಿತ ಮೊಬೈಲ್‌ನಿಂದ ಎಂದು ಎಸ್ಸೆಮ್ಮೆಸ್‌ನ್ನು 9731979899 ಸಂಖ್ಯೆಗೆ ಕಳುಹಿಸಿ ಕೂಪನ್ ಕೋಡ್ ಪಡೆಯಬಹುದು, ಮತ್ತು ಸೀಮೆಎಣ್ಣೆ ಅಂಗಡಿಗೆ ಕೋಡ್ ಸಂಖ್ಯೆಯನ್ನು ತೋರಿಸಬೇಕು. (ಪಡಿತರ ಚೀಟಿಯನ್ನು ಕುಟುಂಬದ ಒಬ್ಬರು ಸದಸ್ಯರ ಆಧಾರ್‌ಗೆ ಜೋಡಣೆ ಮಾಡಿರಬೇಕು) ಅಥವಾ ಹತ್ತಿರದ ಫೋಟೊ ಬಯೋ ಕೇಂದ್ರವನ್ನು ಸಂಪರ್ಕಿಸಿ ಬೆರಳಚ್ಚು ಆಧಾರಿತ ಆಧಾರ್ ಪರಿಶೀಲನೆಯ ಮುದ್ರಿತ ಕೂಪನ್ ಪಡೆಯಬಹುದು, ಅಥವಾ ಇಲಾಖೆಯ ವೆಬ್‌ಸೈಟ್ ಆಧಾರಿತ ಪರಿಶೀಲನೆಯ ಮುದ್ರಿತ ಕೂಪನ್ ಪಡೆಯಬಹುದಾಗಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್ ತಿಳಿಸಿದ್ದಾರೆ.







