ಕಾಯಕದಲ್ಲಿ ಶ್ರದ್ಧೆ, ನಿಷ್ಠೆ, ಭಕ್ತಿ ಇದ್ದಲ್ಲಿ ಯಶಸ್ಸು: ಶಿವಕುಮಾರ್
ಬೀಳ್ಕೊಡುಗೆ ಸಮಾರಂಭ

ಚಿಕ್ಕಮಗಳೂರು, ಜೂ.15: ಪ್ರತಿಯೊಬ್ಬ ವ್ಯಕ್ತಿಯೂ ತಾನು ನಿರ್ವಹಿಸುವ ಕೆಲಸದಲ್ಲಿ ನಿಷ್ಠೆ ಮತ್ತು ಭಕ್ತಿ ಇದ್ದಲ್ಲಿ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹಿರಿಯ ವಕೀಲ ಬಿ.ಶಿವಕುಮಾರ್ ತಿಳಿಸಿದರು. ಅವರು ಕಡೂರು ಪಟ್ಟಣದಲ್ಲಿ ಕಡೂರು ನ್ಯಾಯವಾದಿಗಳ ಸಂಘದ ವತಿಯಿಂದ ಆಯೋಜಿಸಿದ್ದ ನೂತನ ನ್ಯಾಯಾಧೀಶರಾಗಿ ಆಯ್ಕೆಗೊಂಡ ಜಿ.ತಿಮ್ಮಯ್ಯ ಮತ್ತು ಎಚ್.ಓಂಕಾರಮೂರ್ತಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗರಾಜ್ ಸಿದ್ದಪ್ಪ ಅಂಕಸದೊಡ್ಡಿ ಮಾತನಾಡಿ, ನೂತನವಾಗಿ ಆಯ್ಕೆಗೊಂಡ ನ್ಯಾಯಾಧೀಶರು ಹೆಚ್ಚು ಹೆಚ್ಚಾಗಿ ಅಧ್ಯಯನ ಶೀಲರಾಗಿ ಪ್ರತೀ ವಿಷಯವನ್ನು ತಿಳಿದುಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿ. ಟಿ. ತಿಮ್ಮಯ್ಯ, ನನಗೆ ಅಕ್ಷರ ಕಲಿಸಿದ ಪ್ರತಿಯೊಬ್ಬ ಗುರುಗಳನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಕಡು ಬಡತನದಿಂದ ಬಂದಂತಹ ನನ್ನಂತವರಿಗೆ ಆಶ್ರಯ ನೀಡಿ ನ್ಯಾಯಾಧೀಶನಾಗುವಲ್ಲಿ ನನಗೆ ಸಹಕಾರ ನೀಡಿದ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.
ನ್ಯಾಯಾಧೀಶೆ ಅನಿತಾ, ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಚಿ ಮತ್ತು ಎಚ್.ಓಂಕಾರಮೂರ್ತಿ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳ ಸಂಘದ ಸದಸ್ಯರಾದ ಕೆ.ಪಿ.ನೀಲಕಂಠಪ್ಪ, ಕೆ.ಎನ್.ಬೊಮ್ಮಣ್ಣ, ಸಿ.ಎಲ್
.ದೇವರಾಜು, ಸಿ.ಜೆ.ಮಂಜುನಾಥ್, ಸಿ.ಎಂ.ಗಂಗಪ್ಪ, ಎಚ್.ತಿಪ್ಪೇಶ್, ಬಿ.ಕೆ.ಹೊಸೂರು, ಕೆ.ಎನ್.ಮಂಜುನಾಥ್, ಕೆ.ಎನ್.ರಾಜಣ್ಣ ಸೂರಿ ಶ್ರೀನಿವಾಸ್, ಕೆ.ಜಿ.ಪ್ರಕಾಶ್, ಬಿ.ಹರೀಶ್‌ಕುಮಾರ್, ಟಿ.ಗೋವಿಂದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.







