ಯುರೋ ಕಪ್: ರಶ್ಯಕ್ಕೆ ಸೋಲುಣಿಸಿದ ಸ್ಲೋವಾಕಿಯಾ

ಪ್ಯಾರಿಸ್, ಜೂ.15: ಮೊದಲಾರ್ಧದಲ್ಲಿ ತಲಾ ಒಂದು ಗೋಲು ಬಾರಿಸಿದ ವ್ಲಾಡಿಮಿರ್ ವೆಸ್ಸ್ ಹಾಗೂ ಮರೆಕ್ ಹಂಸಿಕ್ ನೆರವಿನಿಂದ ಸ್ಲೋವಾಕಿಯ ತಂಡ ರಶ್ಯ ವಿರುದ್ಧದ ಯುರೋ ಕಪ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ 32ನೆ ನಿಮಿಷದಲ್ಲಿ ಹಂಸಿಕ್ ಗೋಲಿನ ನೆರವಿನಿಂದ 1-0 ಮುನ್ನಡೆ ಸಾಧಿಸಿತು. 45 ನಿಮಿಷದಲ್ಲಿ ಗೋಲು ಬಾರಿಸಿದ ಹಂಶಿಕ್ ಮುನ್ನಡೆಯನ್ನು 2-0ಗೆ ಏರಿಸಿದರು.
ರಶ್ಯದ ಡೆನಿಸ್ ಗ್ಲುಶಕೊವ್ 80ನೆ ನಿಮಿಷದಲ್ಲಿ ಗೋಲು ಬಾರಿಸಿದರು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಈ ಗೆಲುವಿನೊಂದಿಗೆ ಸ್ಲೋವಾಕಿಯಾ 3 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿತು. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿದ್ದ ರಶ್ಯ ಕೇವಲ 1 ಅಂಕ ಗಳಿಸಿದೆ.
Next Story





