ಶಾಲೆಗೆ ತೆರಳಿದ್ದ ಬಾಲಕ ನಾಪತ್ತೆ

ಬಂಟ್ವಾಳ, ಜೂ. 15: ಮನೆಯಿಂದ ಶಾಲೆಗೆಂದು ತೆರಳಿದ್ದ ಬಾಲಕ ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಬುಧವಾರ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಕೊಳ್ನಾಡು ಗ್ರಾಮದ ಸುಲೈಮಾನ್‌ರ ಪುತ್ರ ಮುಹಮ್ಮದ್ ಸಫ್ವಾನ್(13) ನಾಪತ್ತೆಯಾಗಿರುವ ಬಾಲಕ. ಈತ ಮಂಕುಡೆ ಹಿ.ಪ್ರಾ. ಶಾಲೆಯ ಎಂಟನೆ ತರಗತಿಯ ವಿದ್ಯಾರ್ಥಿಯಾಗಿದ್ದು ಎಂದಿನಂತೆ ಮಂಗಳವಾರ ಶಾಲೆಗೆ ತೆರಳಿದ್ದಾನೆ. ಶಾಲೆಗೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ. ಸಂಬಂಧಿಕರ ಮನೆ ಸೇರಿದಂತೆ ಇತರೆಡೆ ಹುಡುಕಾಡಿದರೂ ಬಾಲಕನ ಸುಳಿವು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





