ಶ್ಲಾಘನೀಯ ನಿರ್ಧಾರ
ಮಾನ್ಯರೆ,
ಇತ್ತೀಚೆಗೆ ಹಲವು ಬೇಡಿಕೆಯಿರಿಸಿ ಮುಷ್ಕರದ ಬೆದರಿಕೆ ಹಾಕಿದ ಪೊಲೀಸ್ ಸಿಬ್ಬಂದಿಗೆ, ಸರಕಾರ ‘ಆರ್ಡರ್ಲಿ ಪದ್ಧತಿ’ಯನ್ನು ರದ್ದು ಪಡಿಸಿ ವೇತನವನ್ನು ಪರಿಷ್ಕರಿಸಲು ನಿರ್ಧರಿಸಿದ್ದು ಶ್ಲಾಘನೀಯ.
ಇದುವರೆಗೆ ಕೆಳಹಂತದ ಪೊಲೀಸ್ ಸಿಬ್ಬಂದಿ ಹಿರಿಯ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಕಸಗುಡಿಸುವುದರಿಂದ ತೊಡಗಿ ಅವರ ಮನೆಮಂದಿಯ ಬಟ್ಟೆ ಒಗೆಯುವಲ್ಲಿಯೂ ತೊಡಗಿಕೊಂಡಿರಬೇಕಿತ್ತು.
ಈಗ ಸರಕಾರ ಅಧಿಕಾರಿಗಳ ಮನೆಗೆಲಸದಲ್ಲಿ ನಿಯೋಜನೆಗೊಂಡಿರುವ ಪೇದೆಗಳನ್ನು ಹಿಂದಕ್ಕೆ ಪಡೆದು ಅವರ ಜಾಗದಲ್ಲಿ ಬೇರೆ ನೌಕರರನ್ನು ನಿಯೋಜಿಸಲು ನಿರ್ಧರಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ಮೂಲಕ ಪೊಲೀಸರು ಕೂಡಾ ನಿಟ್ಟುಸಿರು ಬಿಡುವಂತಾಗಿದೆ.
Next Story





