Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ರಾಜಕಾರಣಿಗಳ ಬಾಯ್ತಪ್ಪುಗಳಿಗೆ...

ರಾಜಕಾರಣಿಗಳ ಬಾಯ್ತಪ್ಪುಗಳಿಗೆ ಬಲಿಯಾಗಬೇಕಾದ ಅಮಾಯಕರು

ವಾರ್ತಾಭಾರತಿವಾರ್ತಾಭಾರತಿ15 Jun 2016 11:58 PM IST
share
ರಾಜಕಾರಣಿಗಳ ಬಾಯ್ತಪ್ಪುಗಳಿಗೆ ಬಲಿಯಾಗಬೇಕಾದ ಅಮಾಯಕರು

ಭಾರತದ ಯಾವುದೇ ಗಲಭೆಗಳ ಮೂಲವನ್ನು ಕೆದಕಿದರೆ, ನಮಗೆ ಸಿಗುವುದು ವದಂತಿಯ ಬೂದಿ. ಬರೇ ವದಂತಿಗಳಿಂದಾಗಿಯೇ ಈ ದೇಶದಲ್ಲಿ ಹತ್ತು ಹಲವು ಕೋಮುಗಲಭೆಗಳು ಸಂಭವಿಸಿವೆ. ಹತ್ಯಾಕಾಂಡಗಳು ನಡೆದಿವೆ. ಅಂತಿಮವಾಗಿ ಗಲಭೆಗೆ ಕಾರಣವಾದ ವದಂತಿಯನ್ನು ಜನರು ಮರೆತು, ಆನಂತರದ ಸಾವು ನೋವುಗಳನ್ನೇ ಚರ್ಚಿಸತೊಡಗುತ್ತಾರೆ. ಗಲಭೆಗೆ ಕಾರಣವಾದ ಅಂಶಗಳನ್ನು ಗುರುತಿಸಿ, ನಾವೆಲ್ಲಿ ತಪ್ಪಿದ್ದೇವೆ ಎನ್ನುವುದನ್ನು ಒಮ್ಮೆ ಆತ್ಮವಿಮರ್ಶೆ ನಡೆಸಿದರೆ ಮತ್ತೊಮ್ಮೆ ಅಂತಹ ವದಂತಿಗಳಿಗೆ ಬಲಿಯಾಗಲಾರೆವು. ಆದರೆ ಇಂತಹ ಆತ್ಮ ವಿಮರ್ಶೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ಗಲಭೆ, ಅಶಾಂತಿಗಳಿಗೆ ಹೆಚ್ಚು ಹೆಚ್ಚು ಕಾರಣವಾಗುತ್ತಿದೆ. ಗುಜರಾತ್ ಹತ್ಯಾಕಾಂಡವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. 

ಇಂದಿಗೂ ಗುಜರಾತ್ ಹತ್ಯಾಕಾಂಡವನ್ನು ಗೋಧ್ರೋತ್ತರ ಹತ್ಯಾಕಾಂಡ ಎಂದು ಕೆಲ ಮಾಧ್ಯಮಗಳು ಬಣ್ಣಿಸುತ್ತವೆ. ಅಂದರೆ, ಗೋಧ್ರಾ ರೈಲು ದಹನಕ್ಕೆ ಪ್ರತಿಕಾರವಾಗಿ ನಡೆಸಿದ ಹತ್ಯಾಕಾಂಡ ಎನ್ನುವ ಪರೋಕ್ಷ ಸಮರ್ಥನೆ ಇದರ ಹಿಂದಿದೆ. ನಿಜಕ್ಕೂ ಗೋಧ್ರಾ ರೈಲು ದಹನದಿಂದಾಗಿಯೇ ಹತ್ಯಾಕಾಂಡ ನಡೆಯಿತೇ? ರೈಲು ದಹನ ನಡೆಯದೇ ಇದ್ದಿದ್ದರೆ ಈ ಹತ್ಯಾಕಾಂಡ ನಡೆಯುತ್ತಿರಲಿಲ್ಲವೇ? ಇದರ ಕುರಿತಂತೆ ಭಿನ್ನ ಅಭಿಪ್ರಾಯಗಳಿವೆ. ಅದರಲ್ಲಿ ಒಂದು ಮುಖ್ಯ ಅಭಿಪ್ರಾಯವೆಂದರೆ, ಗೋಧ್ರಾ ರೈಲಿಗೆ ಬೆಂಕಿ ಬಿದ್ದಿರುವುದು ಹೊರಗಿನಿಂದಲ್ಲ. ಒಳಗಿನಿಂದಲೇ ಬೆಂಕಿಯನ್ನು ಹಚ್ಚಲಾಗಿತ್ತು ಎನ್ನುವುದು. ಅಂದರೆ ದುಷ್ಕರ್ಮಿಗಳು ರೈಲಿನೊಳಗೇ ಇದ್ದರು ಎಂದು ಬ್ಯಾನರ್ಜಿ ಆಯೋಗದ ವರದಿ ಬಹಿರಂಗಪಡಿಸುತ್ತದೆ. ರೈಲ್ವೇ ಸಚಿವಾಲಯದ ವತಿಯಿಂದ ನಡೆದ ತನಿಖೆಯ ವರದಿ ಇದು. ಈ ಬೆಂಕಿಗಿಂತಲೂ ವೇಗವಾಗಿ, ರೈಲಿಗೆ ಬೆಂಕಿ ಹಚ್ಚಿದವರು ಮುಸ್ಲಿಮರು ಎಂಬ ವದಂತಿ ಹರಡಿತು ಅಥವಾ ಹರಡಲಾಗಿತು. ರೈಲಿನಲ್ಲಿದ್ದುದು ಆರೆಸ್ಸೆಸ್ ಕಾರ್ಯಕರ್ತರಾಗಿರುವುದರಿಂದ ಮತ್ತು ಅವರು ಅಯೋಧ್ಯೆಯಿಂದ ಮರಳಿದವರಾಗಿರುವುದರಿಂದ ಈ ವದಂತಿಗೆ ಹೆಚ್ಚು ಬಲ ಸಿಕ್ಕಿತ್ತು. 

ಗೋಧ್ರಾಕ್ಕೆ ಬೆಂಕಿ ಹಚ್ಚಿದವರು ಮುಸ್ಲಿಮರು ಎನ್ನುವುದಷ್ಟೇ ಅಲ್ಲ, ರೈಲಿನಲ್ಲಿರುವ ಹಿಂದೂ ಮಹಿಳೆಯರನ್ನು ಮುಸ್ಲಿಮರು ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರಗೈದರು ಎಂದು ವದಂತಿಗಳನ್ನು ಪ್ರಾದೇಶಿಕ ಪತ್ರಿಕೆಗಳು ಸುದ್ದಿ ರೂಪದಲ್ಲಿ ಪ್ರಕಟಿಸಿದ್ದವು. ಹಾಗೆ ನೋಡಿದರೆ ರೈಲಿಗೆ ಬೆಂಕಿ ಹಚ್ಚಿರುವುದು ಮಾಧ್ಯಮಗಳು. ಆ ಬೆಂಕಿಯನ್ನು ಇಡೀ ಗುಜರಾತಿಗೆ ವಿಸ್ತರಿಸುವಲ್ಲೂ ಮಾಧ್ಯಮಗಳ ಪಾತ್ರ ಬಹುದೊಡ್ಡದು. ಆದರೆ ಈ ವದಂತಿ ಆಕಸ್ಮಿಕವಂತೂ ಆಗಿರಲಿಲ್ಲ. ಗೋಧ್ರಾ ಘಟನೆಯಲ್ಲದಿದ್ದರೆ, ಇನ್ನೊಂದು ಘಟನೆಯನ್ನು ನೆಪವಾಗಿಟ್ಟುಕೊಂಡು ತೋಳ ಕುರಿಯನ್ನು ತಿನ್ನುವುದಂತೂ ಖಚಿತವಿತ್ತು. ಆದರೆ ಸಾರ್ವಜನಿಕವಾಗಿ, ತಾವು ಮಾಡುವ ಅತ್ಯಂತ ಹೇಯ ಕೃತ್ಯಕ್ಕೆ ಪ್ರಬಲ ಸಮರ್ಥನೆ ಬೇಕಾಗಿತ್ತು. ಗೋಧ್ರಾ ರೈಲು ದಹನ ಮತ್ತು ಬಳಿಕದ ವದಂತಿಗಳನ್ನು ಬಳಸಿಕೊಂಡು ತನ್ನ ಉದ್ದೇಶವನ್ನು ದುಷ್ಕರ್ಮಿಗಳು ಸಾಧಿಸಿಕೊಂಡರು. ಮೀರತ್‌ನಲ್ಲಿ ಲವ್‌ಜಿಹಾದ್ ಹೆಸರಿನಲ್ಲಿ ಎಂತಹ ವದಂತಿಗಳನ್ನು ಸೃಷ್ಟಿಸಲಾಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿ, ಆ ಬಳಿಕ ಮನೆಯವರೆಲ್ಲ ಸೇರಿ ಅವಳ ಮೇಲೆ ಅತ್ಯಾಚಾರಗೈದರು ಎಂಬ ವದಂತಿಯನ್ನು ಮಾಧ್ಯಮಗಳು ಸತ್ಯಸಂಗತಿಯೆನ್ನುವಂತೆಯೇ ಛಾಪಿಸಿದರು. ಎಷ್ಟೆಂದರೆ, ಆ ತರುಣಿಯ ಕುಟುಂಬ ಕೂಡ ಇದೇ ಹೇಳಿಕೆಯನ್ನು ನೀಡಿತು. 

ಆದರೆ ಬಳಿಕ ತನಿಖೆ ನಡೆಸಿದಾಗ ತರುಣಿಯೇ ಹೃದಯವಿದ್ರಾವಕ ಸಂಗತಿಯನ್ನು ಬಹಿರಂಗಪಡಿಸಿದರು. ಅತ್ಯಂತ ಬಡಕುಟುಂಬದಿಂದ ಬಂದ ತರುಣಿಗೆ ಉದ್ಯೋಗ ಕೊಟ್ಟು ಕಾಪಾಡಿದ್ದೇ ಸ್ಥಳೀಯ ಮುಸ್ಲಿಮರು. ತನ್ನ ಬದುಕಿಗೆ ಆಸರೆಯಾದ ತರುಣನನ್ನೇ ಆಕೆ ಬಳಿಕ ಪ್ರೀತಿಸಿ ಮದುವೆಯಾದರು. ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನುವುದು ಅಪ್ಪಟ ಸುಳ್ಳು. ಹಾಗಾದರೆ ಈವದಂತಿಯನ್ನು ಸೃಷ್ಟಿಸಿದವರು ಯಾರು? ಯಾಕೆ? ಮಾಧ್ಯಮಗಳು ಈ ಸಾಕ್ಷಾಧಾರಗಳೂ ಇಲ್ಲದ ವದಂತಿಯನ್ನು ಯಾಕೆ ಛಾಪಿಸುತ್ತವೆ? ಅಂದರೆ ವದಂತಿ ಸೃಷ್ಟಿಸುವವರ ಜೊತೆಗೆ ಮಾಧ್ಯಮಗಳು ಒಳಗೊಳಗೆ ಶಾಮೀಲಾಗಿವೆಯೇ? ವದಂತಿಯನ್ನು ಹೇಗೆ ಸತ್ಯ ಎಂಬಂತೆ ಬಿಂಬಿಸಬಹುದು ಎನ್ನುವುದಕ್ಕೆ ಇನ್ನೊಂದು ಉದಾಹರಣೆ ತೀರ್ಥಹಳ್ಳಿ ಪ್ರಕರಣ. ನಂದಿತಾ ಎನ್ನುವ ಹುಡುಗಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲಿಲ್ಲ ಎಂಬ ಚಿಂತೆಯಲ್ಲಿ ವಿಷಪ್ರಾಷಣ ಮಾಡಿಕೊಂಡಳು. ತಂದೆತಾಯಿಯರು ಇದನ್ನು ಮುಚ್ಚಿಟ್ಟು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಎರಡು ದಿನಗಳ ಬಳಿಕ ಆಕೆ ಮೃತಪಟ್ಟಳು. ಸಾಯುವವರೆಗೂ ಅವಳು ಆತ್ಮಹತ್ಯೆಗೆ ಯತ್ನಿಸಿರುವುದರ ಬಗ್ಗೆ ಯಾವ ದೂರನ್ನೂ ದಾಖಲಿಸಿರಲಿಲ್ಲ. 

ಆದರೆ ಆಕೆಯ ಕುಟುಂಬದಲ್ಲಿರುವ ಓರ್ವ ಸಂಘಪರಿವಾರ ಮುಖಂಡ ಇಡೀ ಪ್ರಕರಣಕ್ಕೆ ಹೊಸ ಬಣ್ಣ ಕಟ್ಟಿದ. ಮಾಧ್ಯಮಗಳು ಆತ ಉಗುಳಿದ ವಿಷವನ್ನೇ ಸುದ್ದಿ ಎಂದು ಪ್ರಕಟಿಸಿದವು. ಬಹುತೇಕ ಪತ್ರಿಕೆಗಳಲ್ಲಿ ‘‘ಅನ್ಯ ಕೋಮಿನ ಯುವಕರಿಂದ ಸಾಮೂಹಿಕ ಅತ್ಯಾಚಾರ, ಯುವತಿ ಸಾವು’’ ಎಂದು ಪ್ರಕಟವಾದವು. ಆ ಬಳಿಕ ತೀರ್ಥಹಳ್ಳಿಯಲ್ಲಿ ಏನು ನಡೆಯಿತು ಎನ್ನುವುದು ಗೊತ್ತೇ ಇದೆ. ಇಂತಹವು ಪದೇ ಪದೇ ನಡೆಯುತ್ತಿದ್ದರೂ ನಾವು ವದಂತಿಗಳನ್ನು ತಕ್ಷಣ ಯಾಕೆ ಒಪ್ಪಿಕೊಂಡು ಬಿಡುತ್ತೇವೆ? ಅಂದರೆ ಒಂದು ಕೋಮುಗಲಭೆಗೆ ಬೇಕಾಗಿರುವ ನೆಪಗಳಿಗಾಗಿ ಸಮಾಜದ ನಾಗರಿಕರು ಎನ್ನಿಸಿಕೊಂಡ ನಾವು, ಜವಾಬ್ದಾರಿಯುತರು ಎನಿಸಿಕೊಂಡ ಪತ್ರಕರ್ತರೂ ಕಾಯುತ್ತಿದ್ದಾರೆ ಎಂಬುದು ಇದರ ಅರ್ಥವಲ್ಲವೇ?

ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಇಂತಹ ವದಂತಿಗಳು ಬೇರೆ ಬೇರೆ ರೂಪಗಳಲ್ಲಿ ಜನರನ್ನು, ಸಮಾಜವನ್ನು ಕಾಡತೊಡಗಿವೆ. ದಾದ್ರಿಯಲ್ಲಿ ವಂದತಿಯ ಆಧಾರದ ಮೇಲೆ ಒಬ್ಬ ಹಿರಿಯ ಮನುಷ್ಯನನ್ನು ಬರ್ಬರವಾಗಿ ಕೊಂದು ಹಾಕಲಾಯಿತು. ಮುಸ್ಲಿಮರ ಮನೆಗಳಿಗೆ ದಾಂಧಲೆ ಮಾಡಲಾಯಿತು. ಇದೀಗ ಮುಝಫ್ಫರ್ ನಗರದ ಕೈರಾನಾ ಪ್ರದೇಶದಲ್ಲಿ ಮುಸ್ಲಿಮರಿಂದಾಗಿ, ಹಿಂದೂಗಳು ಸಾಮೂಹಿಕವಾಗಿ ವಲಸೆ ಹೋಗುತ್ತಿದ್ದಾರೆ ಎಂಬ ವದಂತಿಯನ್ನು ಸೃಷ್ಟಿಸಿ ಇನ್ನೊಂದು ಗಲಭೆ ಸೃಷ್ಟಿಸಲು ಬಿಜೆಪಿ ಸಿದ್ಧತೆ ನಡೆಸಿತು. ಆದರೆ ಕೊನೆಯ ಕ್ಷಣದಲ್ಲಿ ಆ ಯತ್ನದಲ್ಲಿ ವಿಫಲವಾಯಿತು. 
ಈ ವದಂತಿಯ ಮೂಲಕ ಉದ್ವಿಗ್ನ ವಾತಾವರಣ ಸೃಷ್ಟಿಸುವಲ್ಲಿ ಭಾಗಶಃ ಯಶಸ್ವಿಯಾಯಿತು. ಬಿಜೆಪಿಯ ರಾಷ್ಟ್ರೀಯ ಮುಖಂಡ ಅಮಿತ್ ಶಾ ಕೂಡ ಇದನ್ನು ಮುಂದಿಟ್ಟುಕೊಂಡು ರಾಜಕೀಯ ನಡೆಸಲು ಮುಂದಾಗಿದ್ದರು. ಆದರೆ ವಿವಿಧ ಸಂಘಟನೆಗಳ ತನಿಖೆಯಿಂದ ಸತ್ಯ ಸಂಗತಿ ಬಹಿರಂಗವಾಯಿತು. ಈ ವದಂತಿಯನ್ನು ಹರಡಿದ ಬಿಜೆಪಿ ಮುಖಂಡ ಬಳಿಕ, ತಾನು ಹೇಳಿದ ಹೇಳಿಕೆಯನ್ನು ಹಿಂದೆಗೆದುಕೊಂಡರು. ಅಲ್ಲಿ ವಲಸೆ ಹೋಗುತ್ತಿರುವುದು ಕೇವಲ ಹಿಂದೂ ಕುಟುಂಬಗಳು ಮಾತ್ರವಲ್ಲ, ಮುಸ್ಲಿಮ್ ಕುಟುಂಬಗಳೂ ವಲಸೆ ಹೋಗುತ್ತಿವೆ. ಕಾನೂನನ್ನು ದುರ್ಬಳಕೆ ಮಾಡಿ, ಗೂಂಡಾಗಿರಿ ನಡೆಸುವವರಲ್ಲಿ ಹಿಂದೂಗಳು ಮುಸ್ಲಿಮರು ಸಮಾನರಾಗಿದ್ದಾರೆ ಎನ್ನುವ ಅಂಶವನ್ನು ಅವರೂ ಒಪ್ಪಿಕೊಂಡರು. ಬಾಯ್ತಪ್ಪಿನಿಂದ ಹಿಂದೂ ಕುಟುಂಬಗಳು ಎಂದು ಉಲ್ಲೇಖಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. 

ಆದರೆ ಈ ಬಾಯ್ತಪ್ಪನ್ನು ಮಾಧ್ಯಮಗಳು ಹಿಂದೆ ಮುಂದೆ ನೋಡದೆ ಛಾಪಿಸಿದವು. ಒಂದು ವೇಳೆ, ಈ ಸಣ್ಣ ಬಾಯ್ತಪ್ಪು ಬಹಿರಂಗವಾಗದೇ ಇದ್ದರೆ ಇದಕ್ಕಾಗಿ ಬಲಿಯಾಗಬೇಕಾಗಿದ್ದ ಜೀವಗಳು ಎಷ್ಟು? ಉತ್ತರ ಪ್ರದೇಶಗಳಲ್ಲಿ ಚುನಾವಣೆ ಹತ್ತಿರ ಬರುತ್ತಿದಂತೆಯೇ ಇಂತಹ ಬಾಯ್ತಪ್ಪುಗಳು ಇನ್ನೂ ಹೆಚ್ಚ ತೊಡಗುತ್ತವೆ ಎಂಬ ಎಚ್ಚರಿಕೆ ಮಾಧ್ಯಮಗಳಿಗೆ ಇರಬೇಕು. ತಪ್ಪು ಹೇಳಿಕೆಗಳನ್ನು ಮರುದಿನ ತಿದ್ದಿಕೊಳ್ಳಬಹುದು. ಆದರೆ ಹೋದ ಜೀವ, ಒಡೆದ ಮನಸ್ಸನ್ನು ಮತ್ತೆ ಸರಿಪಡಿಸಲಿಕ್ಕಾಗುವುದಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X