ಬ್ರಿಟಿಷ್ ಮಧ್ಯವರ್ತಿ ಮಿಶೆಲ್ ವಿರುದ್ಧ ಮತ್ತೊಂದು ಆರೋಪ ಪಟ್ಟಿ
ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣ
ಹೊಸದಿಲ್ಲಿ, ಜೂ.15: ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣದ ಮಹತ್ವದ ಬೆಳವಣಿಗೆಯೊಂದರಲ್ಲಿ ಜಾರಿ ನಿರ್ದೇಶನಾಲಯವು ಲಂಚದ ಸಿಂಹ ಪಾಲನ್ನು ತಂದಿದ್ದ ಮುಖ್ಯ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್ ಹಾಗೂ ಆತನ ನೀಡಿಯಾ ಎಕ್ಸಿಂ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ವಿರುದ್ಧ ಹಣ ಚೆಲುವೆ ತಡೆ ಕಾಯ್ದೆಯನ್ವಯ ಆರೋಪ ಪಟಿಯನ್ನು ದಾಖಲಿಸಿದೆ.
ಮಿಶೆಲ್ ವಿರುದ್ಧ ಆರೋಪ ಪಟ್ಟಿ ದಾಖಲಿಸಿರುವುದರಿಂದ ಇಂಗ್ಲೆಂಡ್ನಿಂದ ಭಾರತಕ್ಕೆ ಆತನ ಗಡಿಪಾರು ಸುಲಭವಾಗಲಿದೆಯೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮಿಶೆಲ್ ಮಾತ್ರವಲ್ಲದೆ, ಅವನ ಕಂಪೆನಿಯ ಇಬ್ಬರು ನಿರ್ದೇಶಕರಾದ ಅರ್.ಕೆ.ನಂದಾ ಹಾಗೂ ಜೆ.ಬಿ.ಸುಬ್ರಹ್ಮಣ್ಯಂ ಎಂಬವರ ಹೆಸರುಗಳನ್ನೂ ಕಳೆದ ವಾರ ದಾಖಲಿಸಿರುವ ಆರೋಪ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯ ಉಲ್ಲೇಖಿಸಿದೆ.
Next Story