ಚೆನ್ನೈ: 50 ಬೀದಿ ನಾಯಿಗಳ ಜೀವಂತ ಮಾರಣಹೋಮ!
ಚೆನ್ನೈ, ಜೂನ್ 16; ಚೆನ್ನೈ ಸಮೀಪದ ಮಾರಿ ಮೇಲ್ಮರುವತ್ತೂರಿನಲ್ಲಿ ಐವತ್ತಕ್ಕೂ ಅಧಿಕ ಬೀದಿ ನಾಯಿಗಳನ್ನು ಗ್ರಾಮೀಣರು ಜೀವಂತವಾಗಿ ಸುಟ್ಟು ಕೊಂದು ಹಾಕಿರುವ ದಾರುಣ ಘಟನೆ ವರದಿಯಾಗಿದೆ. ಇದೇ ತಿಂಗಳ ಐದನೆ ತಾರೀಕಿಗೆ ಈ ಕ್ರೂರ ಕೃತ್ಯ ನಡೆದಿದ್ದು ಬೀದಿ ನಾಯಿಗಳು ಆಡುಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಕಾರವಾಗಿ ಗ್ರಾಮೀಣರು ಅವುಗಳಿಗೆ ಈ ಗತಿ ತೋರಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಾಣಿ ಸಂರಕ್ಷನಾದ ಪಿ.ಅಶ್ವತ್ರಿಂದಾಗಿ ಈ ಘಟನೆಹೊರಜಗತ್ತಿಗೆ ತಿಳಿದು ಬಂದಿತ್ತು. ಅವರೇ ದೂರು ನೀಡಿದ್ದು ಪೊಲೀಸರು ಮುರಳಿ, ಮುತ್ತು, ಮುರುಗದಾಸ್, ಜೀವ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಯಿಗಳ ಆಕ್ರಮಣದಿಂದ ತಮ್ಮ ಸಾಕುಪ್ರಾಣಿಗಳು ಗಾಯಗೊಂಡಿವೆ, ಕೆಲವು ನಂತರ ಸತ್ತಿವೆ ಎಂದು ಗ್ರಾಮೀಣರು ಹೇಳಿದರೆಂದುಪೊಲೀಸರು ತಿಳಿಸಿದ್ದಾರೆ. ಆದರೆ ತನ್ನ ತನಿಖೆಯಲ್ಲಿ ಸಾಕು ಪ್ರಾಣಿಗಳನ್ನು ಬೀದಿನಾಯಿಗಳು ಕಚ್ಚಿವೆ ಎಂದು ಗೊತ್ತಾಗಿಲ್ಲ ಎಂದು ಅಶ್ವತ್ ಹೇಳಿಕೊಂಡಿದ್ದಾರೆ. ನಾಯಿಗಳ ಶರೀರ ಅರ್ಧಭಾಗ ಸುಟ್ಟುಹೋಗಿರುವುದನ್ನು ತಾನು ನೋಡಿದ್ದೇನೆಂದು ಅಶ್ವತ್ ಹೇಳಿದ್ದಾರೆ.