ಉಡ್ತಾ ಪಂಜಾಬ್ ಚಿತ್ರವನ್ನು ಥಿಯೇಟರ್ ನಲ್ಲಿ ಮಾತ್ರ ನೋಡಿ : ಆಮಿರ್ ಖಾನ್ ಮನವಿ
ಚಿತ್ರದ ಆನ್ ಲೈನ್ ಸೋರಿಕೆ ವಿರುದ್ಧ ಒಂದಾದ ಬಾಲಿವುಡ್
![ಉಡ್ತಾ ಪಂಜಾಬ್ ಚಿತ್ರವನ್ನು ಥಿಯೇಟರ್ ನಲ್ಲಿ ಮಾತ್ರ ನೋಡಿ : ಆಮಿರ್ ಖಾನ್ ಮನವಿ ಉಡ್ತಾ ಪಂಜಾಬ್ ಚಿತ್ರವನ್ನು ಥಿಯೇಟರ್ ನಲ್ಲಿ ಮಾತ್ರ ನೋಡಿ : ಆಮಿರ್ ಖಾನ್ ಮನವಿ](https://www.varthabharati.in/sites/default/files/images/articles/2016/06/16/630002.jpg)
ನವದೆಹಲಿ: `ಉಡ್ತಾ ಪಂಜಾಬ್' ಚಿತ್ರದ ಆನ್ ಲೈನ್ ಸೋರಿಕೆ ವಿಚಾರವಾಗಿ ತಮ್ಮ ಕಳವಳ ವ್ಯಕ್ತಪಡಿಸಿರುವ ನಟ ಆಮಿರ್ ಖಾನ್ ಚಿತ್ರವನ್ನು ಥಿಯೇಟರ್ ನಲ್ಲಿ ಮಾತ್ರ ನೋಡಿ, ಎಂದು ಜನರಿಗೆ ಮನವಿ ಮಾಡಿದ್ದಾರೆ.
``ನಾವು ವಾಕ್ ಸ್ವಾತಂತ್ರ್ಯವನ್ನು ಬೆಂಬಲಿಸೋಣ. ನಕಲಿ ವೀಡಿಯೋ ತಯಾರಕರನ್ನು ಸೋಲಿಸೋಣ,'' ಎಂದು ಆಮಿರ್ ಟ್ವೀಟ್ ಮಾಡಿದ್ದಾರೆ. ತಮ್ಮ ಮುಂದಿನ ಚಿತ್ರ, ಕುಸ್ತಿಪಟು ಮಹಾವೀರ್ ಫೋಗಟ್ ಜೀವನಾಧರಿತ `ದಂಗಲ್' ಚಿತ್ರೀಕರಣಕ್ಕಾಗಿ ಪ್ರಸಕ್ತ ಲುಧಿಯಾನದಲ್ಲಿರುವ ಆಮಿರ್, ಈ ಹಿಂದೆ ಸೆನ್ಸಾರ್ ಮಂಡಳಿ ಉಡ್ತಾ ಪಂಜಾಬ್ ಚಿತ್ರಕ್ಕೆ 89 ಕಡೆ ಕತ್ತರಿ ಪ್ರಯೋಗ ಮಾಡಲು ಆದೇಶಿಸಿರುವುದರ ವಿರುದ್ಧವೂ ಕೆಂಡ ಕಾರಿದ್ದರು.
``ಇದು ದುರದೃಷ್ಟಕರ. ನನಗೆ ಗೊತ್ತಿರುವ ಹಾಗೆ ಚಿತ್ರ ಅಮಲು ಪದಾರ್ಥ ವ್ಯಸನದ ಕಥೆ ಹೊಂದಿದೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಉದ್ದೇಶ ಹೊಂದಿದೆ. ಈ ಚಿತ್ರದಲ್ಲಿ ಕತ್ತರಿ ಪ್ರಯೋಗ ಮಾಡುವಂತಹುದ್ದು ಏನೂ ಇಲ್ಲ ಎಂದು ನನಗನಿಸುತ್ತದೆ,''ಎಂದು ಆಗ ಆಮಿರ್ ಹೇಳಿದ್ದರು.
ಉಡ್ತಾ ಪಂಜಾಬ್ ಚಿತ್ರದ ಪ್ರಮುಖ ತಾರಾಗಣದಲ್ಲಿರುವ ಶಾಹಿದ್ ಕಪೂರ್, ಆಲಿಯಾ ಭಟ್ ಮತ್ತು ಚಿತ್ರರಂಗದ ಇತರರು ಕೂಡ ಆನ್ ಲೈನ್ ಮೂಲಕ ಚಿತ್ರ ವೀಕ್ಷಿಸದೆ ತಮ್ಮ ಎರಡು ವರ್ಷದ ಶ್ರಮವನ್ನು ವ್ಯರ್ಥಗೊಳಿಸದಂತೆ ಚಿತ್ರ ರಸಿಕರಿಗೆ ಮನವಿ ಮಾಡಿದ್ದಾರೆ.
ಬುಧವಾರ ಟೊರ್ರೆಂಟ್ ಡೌನ್ ಲೋಡ್ ಗಳಲ್ಲಿ ಚಿತ್ರ ಇಂಟರ್ ನೆಟ್ ಬಳಕೆದಾರರಿಗೆ ಲಭ್ಯವಿದ್ದರೂ ಸ್ವಲ್ಪವೇ ಹೊತ್ತಿನಲ್ಲಿ ಡೌನ್ ಲೋಡ್ ಲಿಂಕ್ ಗಳನ್ನು `ಕಾಪಿರೈಟ್ ದೂರಿನನ್ವಯ' ತೆಗೆದು ಹಾಕಲಾಯಿತು ಎಂದು ಹೇಳಲಾಯಿತು.
ಈ ಹಿಂದೆ ಮರಾಠಿ ಚಿತ್ರ ಸೈರಾತ್ ಮತ್ತು ನವಾಝುದ್ದೀನ್ ಸಿದ್ದೀಖಿ ಅಭಿನಯದ ಮಂಝಿ ಕೂಡ ಆನ್ ಲೈನ್ ನಲ್ಲಿ ಸೋರಿಕೆಯಾಗಿ ಚಿತ್ರ ನಿರ್ಮಾಪಕರಿಗೆ ಸಾಕಷ್ಟು ನಷ್ಟವಾಗಿತ್ತು.
Let's support free speech. Let's watch Udta Punjab only in theatres. Don't let pirates and piracy win. Love. a.
— Aamir Khan (@aamir_khan) June 16, 2016
Blood and sweat of many in this film. It's been your battle as much as ours. Now is the time you can show it. Watch UdtaPunjab in theatres
— Shahid Kapoor (@shahidkapoor) June 15, 2016
It's a film from the heart made for you all. And now it's in your hands. #piracydimaadi make it count you all. love and gratitude.#letitfly
— Shahid Kapoor (@shahidkapoor) June 15, 2016
Guys please please do not waste 2 years of hard work, blood, sweat and tears.. Please watch #UdtaPunjab in only in theatres..
— Alia Bhatt (@aliaa08) June 15, 2016
It's the worst feeling to know that your film has been messed with before hand & your computer will be attacked with a virus if you do try..
— Alia Bhatt (@aliaa08) June 15, 2016
Please watch #UdtaPunjab in the cinema this weekend! Don't succumb to online leaks!! An honest film needs an honest audience....#LetItFly
— Karan Johar (@karanjohar) June 15, 2016
Viruses in the #UdtaPunjab links! Anyone downloading it will have a virus attack!! What a way to combat this awful piracy! #piracydimaadi
— Karan Johar (@karanjohar) June 15, 2016
Shocking how #UdtaPunjab has been leaked online. That too a censor copy. A lot of hard work goes into making a film pls say NO to piracy!
— Sonakshi Sinha (@sonakshisinha) June 16, 2016
Films are made with the hard work & passion of everyone involved in creating them. Please don't support piracy.
— Shraddha Kapoor (@ShraddhaKapoor) June 16, 2016
Please watch #UdtaPunjab in the cinema this weekend! Don't succumb to online leaks!! An honest film needs an honest audience....#LetItFly
— Bipasha Basu (@bipsluvurself) June 15, 2016