ಉಳ್ಳಾಲ ಸೆಂಟ್ರಲ್ ಕಮಿಟಿಯಿಂದ ಆರ್ಥಿಕ ನೆರವು

ಮಂಗಳೂರು, ಜೂ. 16: ಆರ್ಥಿಕವಾಗಿ ಹಿಂದುಳಿದವರಿಗೆ ಉಳ್ಳಾಲ ಸೆಂಟ್ರಲ್ ಕಮಿಟಿಯು ಕಳೆದ ಹಲವು ವರ್ಷಗಳಿಂದ ನೆರವು ನೀಡುತ್ತಿದ್ದು, ಮುಂದೆಯೂ ನಡೆಸುವ ಜನಪರ ಕಾರ್ಯಕ್ರಮಗಳಿಗೆ ಜನರು ಸಹಕಾರ ನೀಡಬೇಕೆಂದು ಉಳ್ಳಾಲ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅನ್ವರ್ ಹುಸೈನ್ ಅಭಿಪ್ರಾಯಪಟ್ಟರು.
ಅವರು ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಕೇಂದ್ರ ಕಚೇರಿಯಲ್ಲಿ ರಮಝಾನ್ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಸರ್ವಧರ್ಮದ ಕುಟುಂಬದವರಿಗೆ 20 ಕ್ವಿಂಟಾಲ್ ಉಚಿತ ಅಕ್ಕಿ ವಿತರಣೆ ನಡೆಸಿ ಮಾತನಾಡಿದರು.
ಕಾರ್ಯದರ್ಶಿ ಯು.ಕೆ .ಮುಹಮ್ಮದ್ ಮುಸ್ತಫಾ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸೆಂಟ್ರಲ್ ಕಮಿಟಿ ನಿರಂತರವಾಗಿ ಸಮಾಜಸೇವಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಮಕ್ಕಳ ವಿದ್ಯಾಭ್ಯಾಸ, ಆರ್ಥಿಕ ಹಿಂದುಳಿದವರಿಗೆ ಸಹಾಯಧನ, ಅಕ್ಕಿ ವಿತರಣೆ ಮೊದಲಾದ ಸಮಾಜಮುಖಿ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳುತ್ತಾ ಬಂದಿದೆ. ಮಕ್ಕಳನ್ನು ಐಎಎಸ್, ಐಪಿಎಸ್‌ನಂತಹ ಉನ್ನತ ಪರೀಕ್ಷೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಉಳ್ಳಾಲದ ಹೊಸಪಳ್ಳಿ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ ದುಆ ನೆರವೇರಿಸಿದರು. ಈ ಸಂದರ್ಭ ಟ್ರಸ್ಟಿನ ಸಂಚಾಲಕ ಯು.ಯನ್. ಬಾವಾ, ಖಜಾಂಚಿ ಅಹ್ಮದ್ ಕುಂಬಳೆ, ಉಳ್ಳಾಲ ಸೈಯದ್ ಮದನಿ ದರ್ಗಾದ ಟ್ರಸ್ಟಿಗಳಾದ ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ನವಾಝ್ ಉಳ್ಳಾಲ್, ಇಬ್ರಾಹೀಂ ಖಾಸಿಂ, ಎಸ್.ಬಿ.ಸಿದ್ದೀಖ್, ಯು.ಎಂ.ಇಸ್ಮಾಯಿಲ್ ಉಪಸ್ಥಿತರಿದ್ದರು. ಅಹ್ಮದ್ ಬಾವಾ ಕೊಟ್ಟಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







