ಜೂ.18ರಂದು ಐವನ್ ಡಿಸೋಜ ನೇತೃತ್ವದಲ್ಲಿ ಇಫ್ತಾರ್ ಕೂಟ

ಮಂಗಳೂರು, ಜೂ. 16: ವಿಧಾನ ಪರಿಷತ್ ಸದಸ್ಯಐವನ್ ಡಿಸೋಜರ ನೇತೃತ್ವದಲ್ಲಿ ಜೂನ್ 18ರಂದು ಸಂಜೆ 5 ಗಂಟೆಗೆ ಮಿಲಾಗ್ರಿಸ್ ಐ.ಎಮ್.ಎ. ಸಭಾಂಗಣದಲ್ಲಿ ಸೌಹಾರ್ದ ಮತ್ತು ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿದೆ.
ಇಫ್ತಾರ್ ಕೂಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವರಾದ ಯು.ಟಿ.ಖಾದರ್, ಕೆ. ಅಭಯಚಂದ್ರ ಜೈನ್ ಮತ್ತು ಮುಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಮೇಯರ್ ಹರಿನಾಥ್, ಶಾಸಕರು ಮತ್ತು ಸ್ಥಳೀಯ ನಾಯಕರು, ಮುಸ್ಲಿಂ ಬಾಂಧವರು ಭಾಗವಹಿಸುವುದಾಗಿ ಐವನ್ ಡಿಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





