ಬಜ್ಪೆ: ಬ್ಯಾಂಕ್ ಉದ್ಯೋಗಿಯ ಮನೆಯಲ್ಲಿ ಕಳ್ಳತನ
ಮಂಗಳೂರು, ಜೂ. 16: ಮನೆಯೊಂದರಿಂದ ಚಿನ್ನಾಭರಣವನ್ನು ಕಳವುಗೈದ ಬಗ್ಗೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ಕೈಕಂಬ ಬಳಿಯ ನಿವಾಸಿ ಪ್ರಸ್ತುತ ಕೈಕಂಬ ವಿಜಯಾ ಬ್ಯಾಂಕಿನ ಉದ್ಯೋಗಿ ಜಯಮ್ಮ (60) ಎಂಬವರ ಮನೆಯಿಂದ ಈ ಕಳವು ನಡೆದಿದೆ.
ಜಯಮ್ಮ ಅವರು ಮೇ 13ರಂದು ಮೈಸೂರಿಗೆ ತೆರಳಿದ್ದು, ಜೂನ್ 15ರಂದು ಊರಿಗೆ ಹಿಂದಿರುಗಿದ್ದರು. ರಾತ್ರಿ ಸುಮಾರು 8:30ಕ್ಕೆ ಮನೆಗೆ ಬಂದಾಗ ಮನೆಯ ಮುಖ್ಯ ದ್ವಾರದ ಬೀಗ ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಕಪಾಟು ತೆರೆದಿದ್ದು, ಅದರೊಳಗಿದ್ದ ಚಿನ್ನಾಭರಣ ಕಳವುವಾಗಿದ್ದವು. ಕಳವಾಗಿರುವ ಚಿನ್ನಾಭರಣಗಳ ವೌಲ್ಯ 1.70 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





