ಪ್ರೊ ರೆಸ್ಲರ್ ಅನ್ನು ಕೆಡವಿದ ಸಲ್ವಾರ್ ಕಮೀಝ್ ದಾರಿ ಪಂಜಾಬಿ ಮಹಿಳೆ !
ದುಬಾರಿಯಾದ ಸವಾಲು

ಹೊಸದಿಲ್ಲಿ,ಜೂ.16: ಹಳದಿ ಬಣ್ಣದ ಸಲ್ವಾರ್-ಕಮೀಝ್ ಧರಿಸಿದ್ದ ಪಂಜಾಬ್‌ನ ಮಹಿಳೆಯೋರ್ವರು ವೃತ್ತಿಪರ ಕುಸ್ತಿಪಟು ಎಸೆದ ಬಹಿರಂಗ ಸವಾಲನ್ನು ಸ್ವೀಕರಿಸಿ ಸವಾಲು ಹಾಕಿದ್ದ ಕುಸ್ತಿಪಟುವನ್ನೇ ನೆಲಕ್ಕುರುಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ನಂತೆ ಹರಿದಾಡುತ್ತಿದೆ.
ಹರ್ಯಾಣದ ಮಾಜಿ ಪೊಲೀಸ್ ಅಧಿಕಾರಿ ಹಾಗೂ ಪವರ್ ಲಿಫ್ಟಿಂಗ್ ಹಾಗೂ ಮಾರ್ಷಲ್ ಆರ್ಟ್ಸ್‌ನಲ್ಲಿ ಚಾಂಪಿಯನ್ ಆಗಿರುವ ಕವಿತಾ ಎಂಬಾಕೆಯೇ ಈ ಸಾಧಕಿ. ಇವರು ವೃತ್ತಿಪರ ಮಹಿಳಾ ಕುಸ್ತಿಪಟು ಬಿಬಿ ಬುಲ್‌ಬುಲ್ ನೀಡಿದ್ದ ಬಹಿರಂಗ ಸವಾಲನ್ನು ಸ್ವೀಕರಿಸಿ ಕುಸ್ತಿ ಕಣಕ್ಕೆ ಇಳಿದರು. ಕುಸ್ತಿ ಆರಂಭವಾದ ಕೆಲವೇ ನಿಮಿಷದಲ್ಲಿ ಎದುರಾಳಿಯನ್ನು ನೆಲಕ್ಕುರುಳಿಸಿ ನೆರೆದಿದ್ದ ಪ್ರೇಕ್ಷಕರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡರು. ಈ ಕುಸ್ತಿ ಸ್ಪರ್ಧೆಯು 2015ರಲ್ಲಿ ಡಬ್ಲುಡಬ್ಲುಇ ಚಾಂಪಿಯನ್ ದಿ ಗ್ರೇಟ್ ಖಲಿ ಅವರಿಂದ ಸ್ಥಾಪಿಸಲ್ಪಟ್ಟ ತರಬೇತಿ ಶಾಲೆ ಕಾಂಟಿನೆಂಟೆಲ್ ರೆಸ್ಲ್ಲಿಂಗ್ ಎಂಟರ್‌ಟೈನ್‌ಮೆಂಟ್ ಆಶ್ರಯದಲ್ಲಿ ನಡೆದಿತ್ತು.
‘‘ವೃತ್ತಿಪರ ಕುಸ್ತಿಪಟು ನೆರೆದಿದ್ದ ಪ್ರೇಕ್ಷಕರಿಗೆ ತನ್ನೊಂದಿಗೆ ಸೆಣಸುವಂತೆ ಬಹಿರಂಗ ಸವಾಲು ಹಾಕಿದ್ದರು. ಇದರಿಂದ ನಾನು ಉತ್ತೇಜಿತಗೊಂಡು ಕುಸ್ತಿಕಣಕ್ಕೆ ಧುಮುಕಿದೆ. ನಾನು ಕುಸ್ತಿಯ ದೊಡ್ಡ ಅಭಿಮಾನಿ’’ ಎಂದು ಕವಿತಾ ಹೇಳಿದ್ದಾರೆ.







