ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಶೀಘ್ರದಲ್ಲಿ ವಿತರಿಸಿ: ಕಾಗೋಡು
ಕೃಷಿ ಅಭಿಯಾನ-2016 ಉದ್ಘಾಟನೆ
ಸಾಗರ, ಜೂ.16: ಕೃಷಿಗೆ ಪೂರಕವಾದ ವಾತಾವರ ಣವಿದ್ದು, ಇಲಾಖೆ ರೈತರಿಗೆ ಗೊಬ್ಬರ, ಬಿತ್ತನೆ ಬೀಜವನ್ನು ವಿಳಂಬ ಮಾಡದೆ ನೀಡು ವಂತೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು. ತಾಲೂಕಿನ ಕುದರೂರಿನಲ್ಲಿ ಗುರುವಾರ ಕೃಷಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಕೃಷಿ ಅಭಿಯಾನ- 2016ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರಸಕ್ತ, ಕೃಷಿಯಿಂದ ರೈತರು ವಿಮುಖವಾ ಗುತ್ತಿದ್ದಾರೆ. ಕೃಷಿ ಲಾಭದಾಯಕವಲ್ಲ ಎನ್ನುವ ಮನೋಭಾವ ಅವರಲ್ಲಿ ಗಟ್ಟಿಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಇಂತಹ ಅಭಿಯಾನಗಳ ಅಗತ್ಯವಿದೆ. ರೈತರು ಕೃಷಿಯ ಜೊತೆಗೆ ಇತರೆ ಉಪ ಕಸುಬುಗಳನ್ನು ಮಾಡುವತ್ತ ಹೆಚ್ಚಿನ ಗಮನ ಹರಿಸಬೇಕು. ಹೈನುಗಾರಿಕೆ, ಕುರಿ ಹಾಗೂ ಕೋಳಿ ಸಾಕಣೆ ಯನ್ನು ಕೈಗೊಳ್ಳುವುದರಿಂದ ಆರ್ಥಿಕ ಸ್ಥಿತಿ ಉತ್ತಮ ಗೊಳ್ಳುತ್ತದೆ ಎಂದರು.
ಉದ್ಯೋಗಖಾತ್ರಿ ಯೋಜನೆಯಡಿ ರೈತರ ಜಮೀನು ಅಭಿವೃದ್ಧಿ ಪಡಿಸಲು, ಭತ್ತದ ಕಣ ನಿರ್ಮಿಸಲು ಅವಕಾಶವಿದೆ. ಇದರ ಬಗ್ಗೆ ಮಾಹಿತಿ ಪಡೆದು ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಗಮನ ಹರಿಸಿ. ಯುವಜನರು ಕೃಷಿಯತ್ತ ಗಮನ ಹರಿಸಬೇಕು. ನಗರ ಪ್ರದೇಶಗಳ ವ್ಯಾಮೋಹವನ್ನು ಬಿಟ್ಟು ಹಳ್ಳಿಯಲ್ಲಿದ್ದು ಕೃಷಿ ಅಭಿವೃದ್ಧಿಪಡಿಸುವತ್ತ ಗಮನ ಹರಿಸ ಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯ ಟಿ.ಎಚ್.ಗೌಡ, ಎಸ್.ಅಶೋಕ್, ಬ್ಯಾಕೋಡು ಗ್ರಾಪಂ ಅಧ್ಯಕ್ಷೆ ಉಷಾ ರವಿ, ಎಸ್.ಎಸ್.ಭೋಗ್ ಗ್ರಾಪಂ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ, ತಾಪಂ ಸದಸ್ಯೆ ಸವಿತಾ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು. ಅಕ್ಷತಾ ಪ್ರಾರ್ಥಿಸಿ, ಅರುಣ್ ಕುಮಾರ್ ಸ್ವಾಗತಿಸಿದರು. ಗ್ರಾಮಸ್ಥರಿಂದ ದೂರು: ಕೃಷಿ ಅಭಿಯಾನದಲ್ಲಿ ಗ್ರಾಮಸ್ಥರು, ಕೃಷಿ ಅಧಿಕಾರಿಗಳು ಪಂಚಾಯತ್ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಗ್ರಾಮಸಭೆಗಳಿಗೆ ಹಾಜರಾಗುತ್ತಿಲ್ಲ. ಇದರಿಂದ ಸರಕಾರ ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಜಾರಿಗೆ ತಂದಿರುವ ಯೋಜನೆ ಬಗ್ಗೆ ಸಹ ನಮಗೆ ತಿಳಿಯುವುದಿಲ್ಲ್ಲ. ಕೃಷಿ ಬಗ್ಗೆ ನಿರಾಸಕ್ತಿ ಹೊಂದುತ್ತಿರುವ ರೈತರಲ್ಲಿ ಅಧಿಕಾರಿಗಳೆ ಆತ್ಮಸ್ಥೈರ್ಯ ತುಂಬುತ್ತಿಲ್ಲ ಎಂದು ದೂರಿದರು. ಅಧಿಕಾರಿಗಳ ತರಾಟೆ: ಗ್ರಾಮಸ್ಥರ ಅ
ಹವಾಲು ಸ್ವೀಕರಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಕೃಷಿ ಅಧಿಕಾರಿಗಳು ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಗ್ರಾಮಸ್ಥರಿಗೆ ಅಧಿಕಾರಿಗಳು ಸ್ಪಂದಿಸದೆ ಹೋದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು







