ಈಗ ಹುಮ್ನಾಬಾದ್‌ನಲ್ಲೂ ನೇತಾಜಿ ಪತ್ತೆ!

ಅವರು ಆತನನ್ನು ಲಾಲ್ ಧಾರಿ ಮುತ್ಯ ಎಂದು ಕರೆಯುತ್ತಾರೆ. ಆತ ಬಹಳ ಮುದುಕ. ಕೆಲವರು ಆತನನ್ನು ನೂರು ವರ್ಷ ಪೂರೈಸಿದವರು ಎಂದರೆ, ಇನ್ನು ಕೆಲವರು ತನ್ನ 90ನೇ ವಯಸ್ಸಿನಲ್ಲಿದ್ದಾರೆ ಎನ್ನುತ್ತಾರೆ. ಅವರು ಬೀದರ್- ಶ್ರೀರಂಗಪಟ್ಟಣದ ಹೆದ್ದಾರಿಯ ಬೀದರ್‌ನ ಹುಮ್ನಾಬಾದ್ ಅಲ್ಲಿ ನೆಲೆಸಿದ್ದರು. ಅವರು ಆಗಾಗ್ಗೆ ಕೇಳುತ್ತಿದ್ದ ಪ್ರಶ್ನೆಯೆಂದರೆ ನೇತಾಜಿ ಸುಭಾಷ್ ಚಂದ್ರ ಬೋಸ್ ನೆನಪಿದೆಯೆ ಎನ್ನುವುದು.
ಹಿರಿಯ ವ್ಯಕ್ತಿ ಲಾಲ್ ಧಾರಿ ನಿವಾಸಕ್ಕೆ ಆಗಮಿಸಿದವರಿಗೆ ನೇತಾಜಿ ಚಿತ್ರ ತೋರಿಸುತ್ತಿದ್ದರು ಮತ್ತು ಆ ವ್ಯಕ್ತಿಯನ್ನು ಗುರುತಿಸುವಿರಾ ಎಂದು ಕೇಳುತ್ತಿದ್ದರು. ಭೇಟಿ ನೀಡಿದವರು ಖಂಡಿತಾ, ಅದು ನೇತಾಜಿ ಎಂದು ಹೇಳಿದಾಗ ಅವರ ಮೊಗದಲ್ಲಿ ನಗು ಕಾಣುತ್ತಿತ್ತು.
ಈ ವ್ಯಕ್ತಿ 2001 ಮೇ 13ರಂದು ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಸಂಸತ್ತಿನಂತಹ ಕಟ್ಟಡವೊಂದನ್ನು ಅವರು ಕಟ್ಟಿದ್ದರು. ಅಲ್ಲೇ ಅವರನ್ನು ಸಮಾಧಿ ಮಾಡಲಾಗಿದೆ. ಆ ಕಟ್ಟಡದಲ್ಲಿ 32 ದೊಡ್ಡ ಕಂಬಗಳಿವೆ. ಈ ಕಟ್ಟಡ ಕಟ್ಟಲು ಹಿರಿಯ ವ್ಯಕ್ತಿಗೆ ಹಣ ಎಲ್ಲಿಂದ ಬಂತು ಎಂದು ಯಾರಿಗೂ ಗೊತ್ತಿಲ್ಲ. ಅವರ ಮರಣದ 15 ವರ್ಷಗಳ ನಂತರ ಆ ಕಟ್ಟಡದಲ್ಲಿ ರಹಸ್ಯ ಕೋಣೆಯೊಂದು ಕಂಡುಬಂದಿದೆ. ಈ ಕೋಣೆಯ ಒಳಹೊಕ್ಕಾಗ ಒಂದು ಸೂಟ್ ಕೇಸ್ ಸಿಕ್ಕಿದೆ.
ಹಿರಿಯ ವ್ಯಕ್ತಿಯ ಆಪ್ತರಾಗಿದ್ದ ಸಂತ್ರಮ್ ಮುರ್ಜಾನಿ ಈ ಸೂಟ್ ಕೇಸ್ ಪಡೆದಿದ್ದಾರೆ. ಸಂತ್ರಮ್ ತಂದೆ ಆತ್ಮುಲ್ ಮುರ್ಜಾನಿ ಈ ಹಿರಿಯ ವ್ಯಕ್ತಿಯನ್ನು ಸೇನಾ ಉಡುಪಿನಲ್ಲಿ 1971ರಲ್ಲಿ ಕಂಡಿದ್ದರು. ಶೋಲಾಪುರ ಬಸ್ ನಿಲ್ದಾಣದಲ್ಲಿ ಸಿಕ್ಕ ವ್ಯಕ್ತಿಯನ್ನು ಆತ್ಮುಲ್ ಮನೆಗೆ ಕರೆದುಕೊಂಡು ಬಂದು 1985ವರೆಗೆ ಅತಿಥಿಯಾಗಿ ಇರಿಸಿಕೊಂಡಿದ್ದರು. ನಂತರ ಆತ ಲಾಲ್ ಧರಿಗೆ ತೆರಳಿದ್ದರು.
ಸಂತ್ರಮ್ ಬಟ್ಟೆ ವ್ಯಾಪಾರಿ. ರಹಸ್ಯ ಕೋಣೆಯಿಂದ ಅವರಿಗೆ ಹಲವು ವಸ್ತುಗಳು ಸಿಕ್ಕಿವೆ. ಹಲ್ಲು, ಕೂದಲುಗಳು ಕೂಡ ಸಿಕ್ಕಿದೆ. ಅದರ ಡಿಎನ್‌ಎಯನ್ನು ನೇತಾಜಿ ಜೊತೆಗೆ ಹೋಲಿಸಲಾಗಿದೆ. ನೇತಾಜಿಯ ಮೊಮ್ಮಗ ಆರ್ಡೆಂಡು ಬೋಸ್ ಭೇಟಿಯಾದಾಗ ಅವರು ಡಿಎನ್‌ಎ ಪರೀಕ್ಷೆಗೆ ಸರಕಾರ ಒಪ್ಪಿದರೆ ಸಿದ್ಧ ಎಂದಿದ್ದರು.
ಸೇನಾ ಸಮವಸ್ತ್ರ, ಟೊಪ್ಪಿ, ಜಾಕೆಟ್ ಮತ್ತು ಜರ್ಮನ್ ತಯಾರಿ ವಾಚ್ ಎಲ್ಲವೂ ವಿಶ್ವ ಯುದ್ಧದ ಕಾಲದ್ದು. 1932ರ ಕಂಪಾಸ್, ಫ್ರಾನ್ಸ್ ನಿರ್ಮಿತ ಬೈನಾಕ್ಯುಲರ್ ಗಳೂ ರಹಸ್ಯ ಕೋಣೆಯಲ್ಲಿ 2016 ಜನವರಿಯಲ್ಲಿ ಸಂತ್ರಮ್‌ಗೆ ಸಿಕ್ಕಿದೆ.







