ಯುರೋ ಚಾಂಪಿಯನ್‌ಶಿಪ್:ಇಂಗ್ಲೆಂಡ್‌ಗೆ ರೋಚಕ ಜಯ

ಲೆನ್ಸ್, ಜೂ.16: ಇಂಜುರಿ ಸಮಯದಲ್ಲಿ ಬದಲಿ ಆಟಗಾರ ಡೇನಿಯಲ್ ಸ್ಟರಿಜ್ ಬಾರಿಸಿದ ಆಕರ್ಷಕ ಗೋಲು ಸಹಾಯದಿಂದ ಯುರೋ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವೇಲ್ಸ್ ತಂಡದ ವಿರುದ್ಧ 2-1 ಅಂತರದಿಂದ ರೋಚಕ ಗೆಲುವು ಸಾಧಿಸಿತು.
ಗುರುವಾರ ಇಲ್ಲಿ ನಡೆದ ಬಿ ಗ್ರೂಪ್ ಪಂದ್ಯದಲ್ಲಿ ವೇಲ್ಸ್ ಪರ ಗಾರೆತ್ ಬಾಲೆ 42ನೆ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 56ನೆ ನಿಮಿಷದಲ್ಲಿ ಗೋಲು ಬಾರಿಸಿದ ಜಮ್ಮಿ ವಾರ್ಡಿ ಸ್ಕೋರನ್ನು ಸಮಬಲಗೊಳಿಸಿ ಮರುಹೋರಾಟಕ್ಕೆ ಜೀವ ತುಂಬಿದರು.
90+1ನೆ ನಿಮಿಷದಲ್ಲಿ ಗೋಲು ಬಾರಿಸಿದ ಸ್ಟರಿಜ್ ಇಂಗ್ಲೆಂಡ್‌ಗೆ 2-1 ಅಂತರದ ಗೆಲುವು ತಂದುಕೊಟ್ಟರು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಬಿ ಗುಂಪಿನಲ್ಲಿ 4 ಅಂಕ ಗಳಿಸಿ ಅಗ್ರ ಸ್ಥಾನ ತಲುಪಿದೆ. ವೇಲ್ಸ್ ಹಾಗೂ ಸ್ಲೋವಾಕಿಯ ತಲಾ 3 ಅಂಕವನ್ನು ಗಳಿಸಿದ್ದರೆ, ರಶ್ಯ ಕೇವಲ ಒಂದಂಕವನ್ನು ಪಡೆದು ಕೊನೆಯ ಸ್ಥಾನದಲ್ಲಿದೆ.
Next Story





