ನಾಳೆಯಿಂದ ರಮಝಾನ್ ಪ್ರವಚನ
ಮಂಜೇಶ್ವರ, ಜೂ.16: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ವತಿಯಿಂದ ರಮಝಾನ್ ಪ್ರವಚನ ಜೂ.18ರಿಂದ 22ರ ತನಕ ಉದ್ಯಾವರ ರಫಾ ಹಾಲ್‌ನಲ್ಲಿ ನಡೆಯಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 12:30ರ ತನಕ ನಡೆಯುವ ಪ್ರವಚನದಲ್ಲಿ ಜೂ.18, 19ರಂದು ಅಲಿ ಅಕ್ಬರ್ ಬಾಖವಿ ತನಿಯಪುರಂ, 20ರಂದು ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು, 21ರಂದು ಶೌಕತಲಿ ವೆಳ್ಳಮುಂಡ, 22ರಂದು ಹಾಶಿರ್ ಅಲ್ ಹಾಮಿದಿ ಕುಂಜತ್ತೂರು ಭಾಷಣ ಮಾಡುವರು. 22ರಂದು ಸಂಜೆ 4ಕ್ಕೆ ಮಜ್ಲಿಸುನ್ನೂರ್ ನಡೆಯಲಿದೆ.ಇಂದು ದ್ಸಿಕ್ರ್ ಹಲ್ಕಾ: ಮಚ್ಚಂಪಾಡಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ವತಿಯಿಂದ ದ್ಸಿಕ್ರ್ ಹಲ್ಕಾ ಹಾಗೂ ಇಫ್ತಾರ್ ಕೂಟವು ಜೂ.17ರಂದು ಇಸ್ಲಾಮಿಕ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





