ಮನೆಗೆ ನುಗ್ಗಿ ಮಹಿಳೆಯರಿಗೆ ಹಲ್ಲೆ: ಬಂಧನ
ಮಂಜೇಶ್ವರ, ಜೂ.16: ಮನೆಗೆ ನುಗ್ಗಿ ಮಹಿಳೆಯರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದೇಲಂಪಾಡಿಯ ಕಕ್ಕೆಪ್ಪಾಡಿ ನಿವಾಸಿ ಯಶೋಧರ(27)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಕಕ್ಕೆಪ್ಪಾಡಿ ನಿವಾಸಿ ಸುಲೋಚನಾ(38) ಮತ್ತು ಅವರ ತಾಯಿ ಬಾಳೆಮೂಲೆ ಓಟೆಡ್ಕ ನಿವಾಸಿ ರತ್ನಾ(60)ರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ಜೂ.9ರಂದು ರಾತ್ರಿ ಹಲ್ಲೆ ಪ್ರಕರಣ ನಡೆದಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
Next Story





