ಮೋದಿ ಜೊತೆ ಕಲಿತವರಿಗೆ 2 ಲಕ್ಷ ರೂ. ಬಹುಮಾನ
ದಿಗ್ವಿಜಯ್ ಸಿಂಗ್ ಘೋಷಣೆ
ಹೊಸದಿಲ್ಲಿ, ಜೂ. 16: ಪ್ರಧಾನಿ ನರೇಂದ್ರ ಮೋದಿ ಅವರಿಂದ ಟೀ ಖರೀದಿಸಿದವರು ಅಥವಾ ಅವರೊಂದಿಗೆ ಕಲಿತವರು ಮುಂದೆ ಬಂದರೆ ಅವರಿಗೆ 2 ಲಕ್ಷರೂ. ಬಹುಮಾನ ನೀಡುವುದಾಗಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಪ್ರಕಟಿಸಿದ್ದಾರೆ.
‘ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ‘ಚಾಯಿಕಿ ಚರ್ಚಾ’ ಹೆಸರಿನ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿಗ್ವಿಜಯ್ ಸಿಂಗ್ “ಮೋದಿಯವರೊಂದಿಗೆ ಪದವಿ ಹಂತದಲ್ಲಿ ಕಲಿತವರು ಯಾರಾದರೂ ಮುಂದೆ ಬಂದಲ್ಲಿ ಅವರಿಗೆ ಬಹುಮಾನ ನೀಡಲಾಗುವುದು. ಮೋದಿಯವರೇ ಈ ಹಿಂದೆ ತಾನು ಹತ್ತನೇ ತರಗತಿ ಕಲಿತವನು ಎಂದು ಹೇಳಿದ್ದರು. ಆದರೆ ಈಗ ಪದವೀಧರ ಎಂದು ಹೇಳಿಕೊಳ್ಳುತ್ತಿದ್ದಾರೆ” ಎಂದು ಕುಟುಕಿದರು.
Next Story