ಭಾರತ-ಅಮೆರಿಕದ ಸೇನಾ ಸಹಕಾರಕ್ಕೆ ಸೆನೆಟ್ ಅನುಮೋದನೆ
ವಾಶಿಂಗ್ಟನ್, ಜೂ. 16: ಬೆದರಿಕೆ ವಿಶ್ಲೇಷಣೆ, ಸೇನಾ ಸಿದ್ಧಾಂತ, ಸೇನಾ ಯೋಜನೆ, ಭೌತಿಕ ಬೆಂಬಲ ಮತ್ತು ಗುಪ್ತಚರ ಮಾಹಿತಿ ಸಂಗ್ರಹ ಮತ್ತು ವಿಶ್ಲೇಷಣೆಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಭಾರತದೊಂದಿಗೆ ಸೇನಾ ಸಹಕಾರವನ್ನು ಹೆಚ್ಚಿಸುವ ಪ್ರಸ್ತಾಪವೊಂದನ್ನು ಅಮೆರಿಕದ ಸೆನೆಟ್ ಅವಿರೋಧವಾಗಿ ಅಂಗೀಕರಿಸಿದೆ.
‘‘ಭಾರತದೊಂದಿಗಿನ ಸೇನಾ ವಿನಿಮಯಕ್ಕೆ ಅನುಮೋದನೆ’’ ಎಂಬ ಹೆಸರಿನ ತಿದ್ದುಪಡಿಗೆ ಸೆನೆಟ್ ಈ ವಾರದ ಆದಿ ಭಾಗದಲ್ಲಿ 85-13 ಮತಗಳಿಂದ ಅನುಮೋದನೆ ನೀಡಿದೆ.
ಸೆನೆಟರ್ ಜಾನ್ ಸಲಿವಾನ್ ಮಂಡಿಸಿದ ತಿದ್ದುಪಡಿಯನ್ನು ಸೆನೆಟರ್ ಜಾನ್ ಕಾರ್ನಿ, ಮಾರ್ಕ್ ವಾರ್ನರ್ ಮತ್ತು ಸೆನೆಟರ್ ಮಾರ್ಕ್ ಕಿರ್ಕ್ ಅನುಮೋದಿಸಿದರು.
Next Story





