ಚಿಲ್ಡ್ರನ್ಸ್ಸ್ ಕಾರ್ನರ್: ಮಕ್ಕಳ ರೆಡಿಮೇಡ್ ಡ್ರೆಸ್‌ಗಳ ಆಯ್ಕೆಗೆ ಸೂಕ್ತ ತಾಣ

ಮಂಗಳೂರು, ಜೂ.16: ನಗರದ ಬಲ್ಮಠ ರಸ್ತೆಯ ಹೊಟೇಲ್ ರೂಪಾ ಬಿಲ್ಡಿಂಗ್‌ನಲ್ಲಿರುವ ಮಕ್ಕಳ ಸಿದ್ಧ ಉಡುಪುಗಳ ಬೃಹತ್ ಮಳಿಗೆ ‘ಚಿಲ್ಡ್ರನ್ಸ್ಸ್ ಕಾರ್ನರ್’ ರಮಝಾನ್‌ನ ಪ್ರಯುಕ್ತ ಮಕ್ಕಳ ರೆಡಿಮೇಡ್ ಉಡುಪು ಗಳ ಹೊಸ ಸ್ಟಾಕ್‌ನೊಂದಿಗೆ ಸರ್ವಸಜ್ಜಿತಗೊಂಡಿದ್ದು ಹಬ್ಬದ ಸಲುವಾಗಿ ವಿಶೇಷ ಡಿಸ್ಕೌಂಟ್‌ನ್ನು ಸಹ ನೀಡಲಾಗುವುದು.
ಕಳೆದ ಹಲವಾರು ದಶಕಗಳಿಂದ ಮಕ್ಕಳ ರೆಡಿಮೇಡ್ ಡ್ರೆಸ್‌ಗಳಿಗೆ ಪ್ರಸಿದ್ಧವಾದ ಈ ಮಳಿಗೆ ವಿನೂತನ ಸಂಗ್ರಹದಿಂದ ಗ್ರಾಹಕರ ಮೆಚ್ಚುಗೆಗೂ ಪಾತ್ರವಾಗಿದೆ. ಈಗ ಹೊಸ ಅಂತಸ್ತು ವಿಶಾಲವಾದ ಸ್ಥಳಾವಕಾಶದೊಂದಿಗೆ ಎಲ್ಲ ವಯೋಮಿತಿಯ ಮಕ್ಕಳ ಆಧುನಿಕ ಫ್ಯಾಶನ್ ಉಡುಪುಗಳಾದ ಶರ್ಟ್ಸ್, ಟ್ರೌಸರ್ಸ್, ಜೀನ್ಸ್, ಫ್ರಾಕ್ಸ್, ಗೌನ್, ಕ್ಯಾಪ್‌ಟಾಪ್, ಮಸ್ತಾನಿ, ಶರ್ಟ್ಸ್, ಬಾಬಾ ಸೂಟ್ಸ್‌ಗಳ ಹೊಸ ಡಿಸೈನ್‌ನ ಹೊಸ ಸ್ಟಾಕ್‌ಗಳು ಮುಂಬರುವ ಹಬ್ಬಗಳ ಸಮಾರಂಭಕ್ಕೆ ಲಭ್ಯವಿದೆ.
ನಗರದ ಹೃದಯಭಾಗದಲ್ಲಿರುವ ‘ಚಿಲ್ಡ್ರನ್ಸ್ಸ್ ಕಾರ್ನರ್’ ವಾರದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story





