ಕಾಶ್ಮೀರ: ನಾಲ್ವರು ಉಗ್ರರು, ಒಬ್ಬ ಸೈನಿಕ ಬಲಿ
ಶ್ರೀನಗರ, ಜೂ.16: ಕಾಶ್ಮೀರದ ನಿಯಂತ್ರಣ ರೇಖೆಯ ಸಮೀಪ ತಂಗ್‌ಧಾರ್ ವಲಯದಲ್ಲಿಗಡಿ ನುಸುಳುವಿಕೆಯ ಪ್ರಯತ್ನವೊಂದನ್ನು ಇಂದು ಸೇನೆಯು ವಿಫಲಗೊಳಿಸಿದ್ದು, ನಾಲ್ವರು ಉಗ್ರರು ಹಾಗೂ ಒಬ್ಬ ಸೈನಿಕ ಹತರಾಗಿದ್ದಾರೆ. ಇದು ಕಳೆದ 3 ದಿನಗಳಲ್ಲಿ ನಡೆದ 2ನೆ ಗಡಿ ನುಸುಳುವಿಕೆ ಪ್ರಯತ್ನವಾಗಿದೆ.
ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಪ್ರಾಥಮಿಕ ಗುಂಡು ವಿನಿಮಯದಲ್ಲಿ ಇಬ್ಬರು ಉಗ್ರರು ಹತರಾದರು ಹಾಗೂ ಒಬ್ಬ ಸೈನಿಕ ಗಾಯಗೊಂಡಿದ್ದನು. ಗಾಯಾಳು ಯೋಧ ಬಳಿಕ ಕೊನೆಯುಸಿರೆಳೆದನೆಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ನುಸುಳುವಿಕೆ ವಿರೋಧಿ ಕಾರ್ಯಾಚರಣೆಯಲ್ಲಿ ಮತ್ತಿಬ್ಬರು ಉಗ್ರರನ್ನು ಕೊಲ್ಲಲಾಗಿದೆಯೆಂದು ಅವರು ಹೇಳಿದ್ದಾರೆ.
Next Story





