ಇಂದು ವಿದ್ಯುತ್ ನಿಲುಗಡೆ
ಉಡುಪಿ, ಜೂ.16: ಕುಂಜಿಬೆಟ್ಟು ಉಪವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್‌ಗಳಲ್ಲಿ ಜೂ.17ರಂದು ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 9:30ರಿಂದ ಸಂಜೆ 5ರವರೆಗೆ ಉಡುಪಿ ನಗರ ಪ್ರದೇಶಗಳಾದ ಕುಂಜಿಬೆಟ್ಟು, ಶ್ರೀಕೃಷ್ಣ ಮಠ ಪರಿಸರ, ಒಳಕಾಡು, ಕೊಳಂಬೆ, ಮಿಶನ್ ಕಂಪೌಂಡ್, ಶಾಂತಿನಗರ, ಕಿನ್ನಿಮುಲ್ಕಿ, ಕೋರ್ಟ್ ರಸ್ತೆ, ಕೆ.ಎಂ.ಮಾರ್ಗ, ಮಾರುತಿ ವೀಥಿಕಾ, ಬೈಲೂರು, ಉದ್ಯಾವರ, ಪಿತ್ರೋಡಿ, ಕಡೆಕಾರ್, ಪಣಿಯಾಡಿ, ಚಿಟ್ಪಾಡಿ, ಇಂದಿರಾ ನಗರ, ಹನುಮಾನ್ ಗ್ಯಾರೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





