ಶೀಲಾ ದೀಕ್ಷಿತ್ ಉ.ಪ್ರದೇಶದ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ?

ಹೊಸದಿಲ್ಲಿ, ಜೂ.16: ಕಾಂಗ್ರೆಸ್ ನಾಯಕಿ ಹಾಗೂ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ರನ್ನು ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆಯೆಂದು ಎನ್‌ಡಿಟಿವಿ ವರದಿ ಮಾಡಿದೆ.
ದೀಕ್ಷಿತ್ ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ದಿಲ್ಲಿಯಲ್ಲಿ ಭೇಟಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅಭಿಯಾನದ ನೇತೃತ್ವ ವಹಿಸಲು ನಾಯಕತ್ವರು ಅವರ ಹೆಸರನ್ನು ಪ್ರಸ್ತಾವಿಸುವ ನಿರೀಕ್ಷೆಯ ಬಗ್ಗೆ ಪಕ್ಷದ ವಲಯದಲ್ಲಿ ಊಹಾಪೋಹ ಹಬ್ಬಿದೆ.
ಇದೇ ವೇಳೆ, ಕಾಂಗ್ರೆಸ್ ನಾಯಕ ಕಮಲನಾಥ್ ರಾಜೀನಾಮೆ ನೀಡಿರುವ, ಪಂಜಾಬ್ ಹಾಗೂ ಹರ್ಯಾಣದ ಪಕ್ಷದ ಉಸ್ತುವಾರಿ ಸ್ಥಾನಕ್ಕೆ ಶೀಲಾರನ್ನು ಹೆಸರಿಸುವ ಸಾಧ್ಯತೆಯೂ ಇದೆಯೆಂದು ‘ಇಂಡಿಯಾ ಟುಡೇ’ ವಾಹಿನಿ ವರದಿ ಮಾಡಿದೆ. ಈ ಸಂಬಂಧ ಕಾಂಗ್ರೆಸ್ ಇನ್ನಷ್ಟೇ ಘೋಷಣೆ ಮಾಡಬೇಕಾಗಿದೆ.
Next Story





