ಕೇರಳದ 11 ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಕೆಯಾಗಲಿದೆ ಸಿಸಿ ಕ್ಯಾಮರಾ

ಕಾಸರಗೋಡು, ಜೂ.17: ಮಹಿಳೆಯರ ಸುರಕ್ಷತೆಯ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ಉತ್ತರ ಕೇರಳದ 11 ರೈಲು ನಿಲ್ದಾಣಗಳಲ್ಲಿ ಕ್ಯಾಮರಾ ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ನಿರ್ಭಯಾ ಯೋಜನೆಯಡಿ ಈ ನಿಲ್ದಾಣಗಳಲ್ಲಿ ವಿಶೇಷ ನಿಗಾ ಕ್ಯಾಮರಾ ಅಳವಡಿಸಲಾಗುತ್ತಿದೆ. ಕಾಸರಗೋಡು , ಕಾಞಂಗಾಡ್, ಪಯ್ಯನ್ನೂರು, ಕಣ್ಣೂರು, ತಲಶ್ಯೇರಿ, ವಡಗರ, ಶೋರ್ನೂರು, ಪಾಲಕ್ಕಾಡ್ ಮೊದಲಾದ ನಿಲ್ದಾಣಗಳಲ್ಲಿ ಕ್ಯಾಮರ ಅಳವಡಿಕೆಗೆ ಆದೇಶ ಹೊರಡಿಸಲಾಗಿದೆ.
ಯಾವ ನಿಲ್ದಾಣಗಳಲ್ಲಿ ಕ್ಯಾಮರಾ ಅಳವಡಿಸಬೇಕೆಂಬ ಬಗ್ಗೆ ಸುರಕ್ಷಾ ವಿಭಾಗ ವರದಿ ಸಲ್ಲಿಸಿತ್ತು. ಇದರಲ್ಲಿ ಕಾಸರಗೋಡು ಜಿಲ್ಲೆಯ ಕಾಸರಗೋಡು ಮತ್ತು ಕಾಞಂಗಾಡ್ ನಿಲ್ದಾಣ ಒಳಗೊಂಡಿದೆ. ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ದುಷ್ಕೃತ್ಯಗಳು ನಡೆಯುತ್ತಿರುವುದರಿಂದ ವಿಶೇಷ ನಿಗಾ ವಹಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಡಿಸೆಂಬರ್ ತಿಂಗಳಲ್ಲಿ ಈ ಕ್ಯಾಮರಾಗಳು ಕಾರ್ಯಾರಂಭಿಸುವ ಸಾಧ್ಯತೆ ಇದೆಯೆಂದು ತಿಳಿದುಬಂದಿದೆ.
Next Story





