ಚಿತ್ರದುರ್ಗ : ಮಳೆಗಾಗಿ ಬಾಲಕನನ್ನು ನಗ್ನ ಮೆರವಣಿಗೆ ಮಾಡಿದರು !
ಸಮಾಜ ಕಲ್ಯಾಣ ಸಚಿವ ಆಂಜನೇಯರ ಜಿಲ್ಲೆಯಾಗಿರುವ ಚಿತ್ರದುರ್ಗದಲ್ಲಿ ನಡೆದ ಘಟನೆ
.jpg)
ಚಿತ್ರದುರ್ಗ , ಜೂ.17: ಮಳೆಗಾಗಿ ಬಾಲಕನೊಬ್ಬನನ್ನು ನಗ್ನ ಮೆರವಣಿಗೆ ನಡೆಸಿದ ಘಟನೆ ಸಮಾಜ ಕಲ್ಯಾಣ ಸಚಿವ ಆಂಜನೇಯರ ಜಿಲ್ಲೆಯಾಗಿರುವ ಚಿತ್ರದುರ್ಗದಲ್ಲಿ ನಡೆದಿದೆ.
ಜೂನ್ 10 ರಂದು ಪಾಂಡರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು,ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ನಗ್ನವಾಗಿರುವ ಬಾಲಕನನ್ನು ಬ್ಯಾಂಡ್, ವಾಲಗದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿರುವ ದೃಶ್ಯದ ವೀಡಿಯೊ ದಾಖಲೆ ಲಭ್ಯವಾಗಿದೆ.
ನಗ್ನವಾಗಿ ಮೆರವಣಿಗೆಯಲ್ಲಿ ತೆರಳಿದ ಬಳಿಕ ಬಾಲಕನಿಗೆ ಹೊಸ ಬಟ್ಟೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
Next Story





