ಕೈರಾನ ಕುಟುಂಬಗಳ ವಲಸೆ, ಬಿಜೆಪಿ ಎಂಪಿ ಹೇಳಿದ್ದು ಶುದ್ಧ ಸುಳ್ಳು!: ಜಿಲ್ಲಾಡಳಿತ ವರದಿ

ಕೈರಾನ, ಜೂನ್ 17: ಮುಸ್ಲಿಮರ ನಿರಂತರ ಹಿಂಸೆ ಜಗಳಕ್ಕೆ ಹೆದರಿ ಉತ್ತರಪ್ರದೇಶದ ಕೈರಾನ ಗ್ರಾಮದಿಂದ 346 ಕುಟುಂಬಗಳು ವಲಸೆ ಹೋಗಿವೆ ಎಂದ ಬಿಜೆಪಿ ಎಂಪಿ ಹುಕುಂಸಿಂಗ್‌ರ ವಾದ ಸುಳ್ಳಾಗಿದೆ. ಹೆದರಿ ಹೀಗೆ ಕೇವಲ ಮೂರು ಕುಟುಂಬಗಳು ಓಡಿ ಹೋಗಿವೆ ಎಂದು ಶಿಮ್ಲಾ ಜಿಲ್ಲಾಡಳಿತ ವರದಿ ನೀಡಿದೆ.
ಸಂಸತ್ಸದಸ್ಯರ ಪಟ್ಟಿಯ 27 ಕುಟುಂಬಗಳು ಈಗಲೂ ಕೈರಾನದಲ್ಲಿ ವಾಸಿಸುತ್ತಿರುವುದನ್ನು ಅಧಿಕಾರಿಗಳು ಕಂಡು ಹಿಡಿದು ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಂಡಿದ್ದಾರೆ. ಮಿಕ್ಕುಳಿದ ಕುಟುಂಬಗಳಲ್ಲಿ ಹಲವು ಹತ್ತು ವರ್ಷ ಮೊದಲೇ ಊರಿಂದ ಬೇರೆ ಊರಿಗೆ ಹೋಗಿವೆ. ವ್ಯಾಪಾರ ವ್ಯವಹಾರ ವಿದ್ಯಾಭ್ಯಾಸ ಇತ್ಯಾದಿ ಅಗತ್ಯಕ್ಕಾಗಿ ಅವು ಊರು ತೊರೆದಿದ್ದವೇ ಹೊರತು ಬಿಜೆಪಿ ಸಂಸದನ ಸುಳ್ಳುವಾದದಂತೆ ಮುಸ್ಲಿಮರಿಗೆ ಹೆದರಿ ಹೋದದ್ದಾಗಿರಲಿಲ್ಲ ಎಂಬುದೀಗ ಜಿಲ್ಲಾಡಳಿತದ ವರದಿಯಿಂದ ಬಹಿರಂಗವಾಗಿದೆ. ಹೀಗೆ ಹೋದವರು ಹತ್ತು ಕಿ.ಮೀ. ದೂರದ ಶಿಮ್ಲಾದಲ್ಲಿಯೇ ವಾಸಿಸುತ್ತಿದ್ದಾರೆ. ಅಧಿಕಾರಿಗಳು ಮೂರು ಕುಟುಂಬಗಳು ಊರು ಬಿಟ್ಟಿವೆ ಎಂದು ಹೇಳಿದ್ದಾರೆ. ಇವರೆಲ್ಲಿದ್ದಾರೆ ಯಾಕೆ ಊರು ಬಿಟ್ಟಿದ್ದೀರಿ ಎಂದು ಕಾರಣ ತಿಳಿದುಕೊಳ್ಳಲು ಅಧಿಕಾರಿಗಳು ಈಗ ಶ್ರಮಿಸುತ್ತಿದ್ದಾರೆ. ಎಂಪಿ ತಯಾರಿಸಿದ ಪಟ್ಟಿಯಲ್ಲಿರುವ 16 ಮಂದಿ ಬಹಳ ಹಿಂದೆ ತೀರಿಹೋದವರದ್ದಾಗಿದ್ದು. ಇವರಲ್ಲಿ ಮೂವರ ವಾರಸುದಾರರು ಈಗಲೂ ಕೈರಾನದಲ್ಲಿದ್ದಾರೆ.2006ಕ್ಕೂ ಮೊದಲೆ 67ಕುಟುಂಬಗಳು ಕೈರಾನ ಬಿಟ್ಟು ಹೋಗಿವೆ. ಕೆಲವು ಕುಟುಂಬಗಳು 20ವರ್ಷ ಹಿಂದೆ ಊರು ತೊರೆದು ಇನ್ನೊಂದು ಊರಲ್ಲಿ ನೆಲೆಸಿದ್ದವು. 179 ಕುಟುಂಬಗಳು ನಾಲ್ಕು ಐದು ವರ್ಷ ಹಿಂದೆಯೇಹೋಗಿದ್ದವರು. 73 ಮಂದಿ ಎರಡು ವರ್ಷ ಮುಂಚೆಯೇ ಇಲ್ಲಿಂದ ಹೋಗಿದ್ದರು ಎಂದು ಜಿಲ್ಲಾಡಳಿತ ವರದಿ ಸಲ್ಲಿಸಿದೆ.





