ಫೆಲೆಸ್ತೀನ್ ನ ‘ಫ್ರೆಂಡ್’ ಸಂಸದೆ ಜೋ ಕೊಕ್ಸ್ ಹತ್ಯೆಯ ಹಿಂದೆ ನಿಯೋ ನಾಝಿ ಗುಂಪು ?

ಲಂಡನ್ : ಗುರುವಾರ ಹತ್ಯೆಗೀಡಾದ ಲೇಬರ್ ಪಾರ್ಟಿ ಸಂಸದೆ ಜೋ ಕೊಕ್ಸ್ ಅವರು ಲೇರ್ ಫ್ರೆಂಡ್ಸ್ ಆಫ್ ಫೆಲೆಸ್ತೀನ್ ಜತೆ ನಂಟು ಹೊಂದಿದ್ದರೆನ್ನಲಾಗಿದ್ದುಗಾಝಾದಲ್ಲಿ ಇಸ್ರೇಲ್ ವಿಧಿಸಿರುವ ನಿಷೇಧಗಳನ್ನುಕೈಬಿಡುವಂತೆ ಆಗ್ರಹಿಸುವಈ ಸಂಘಟನೆಯ2015 ರ ವರದಿಯ ಒಂದು ಭಾಗವನ್ನು ಬರೆದಿದ್ದರೆನ್ನಲಾಗಿದೆ.
ಹೊಸ ಸಂಸದೆಯಾಗಿದ್ದರೂ ಕಾಕ್ಸ್ ಅವರು ಸಿರಿಯಾದಿಂದ ವಲಸೆ ಬರುವವರಿಗೆ ಆಶ್ರಯ ನೀಡಬೇಕೆಂಬುದನ್ನು ಬಲವಾಗಿ ಪ್ರತಿಪಾದಿಸುತ್ತಿದ್ದರು. ಆಕೆಯ ಹತ್ಯೆಯ ತನಿಖೆ ಈಗ ಪ್ರಾಥಮಿಕ ಹಂತದಲ್ಲಿದ್ದರೂ‘ಬ್ರಿಟನ್ ಫಸ್ಟ್’ ಎಂಬ ಘೋಷಣೆಯನ್ನು ಶಂಕಿತ ಕೊಲೆಗಾರ ಕೂಗಿರುವುದು ಈ ಕೊಲೆಯ ಹಿಂದೆ ರಾಜಕೀಯ ಉದ್ದೇಶವಿರಬಹುದೆಂಬ ಶಂಕೆಯನ್ನು ಬಲಗೊಳಿಸಿದೆ.
ಬಲಪಂಥೀಯ ಸಂಘಟನೆಯಾದ ಬ್ರಿಟನ್ ಫಸ್ಟ್ ಫೇಸ್ ಬುಕ್ ನಲ್ಲಿ ಇಸ್ಲಾಮೋಫೋಬಿಕ್ ಮೆಮೆಗಳನ್ನು ಹರಡುವುದರಲ್ಲಿ ಎತ್ತಿದ ಕೈಯ್ಯಿಗಿದೆಯಲ್ಲದೆ ಅದರ ಕಾರ್ಯಕರ್ತರು ತಮ್ಮ ಕೈಗಳಲ್ಲಿ ಶಿಲುಬೆಗಳನ್ನು ಹಿಡಿದು ಮಸೀದಿಗಳ ಮುಂದೆ ಪ್ರತಿಭಟನೆಗಳನ್ನೂ ನಡೆಸಿದ್ದಾರೆ. ಇತ್ತೀಚೆಗೆ ಅದು ತನ್ನ ಕಾರ್ಯಕರ್ತರಿಗೆ ನಡೆಸಿದ ತರಬೇತಿ ಕಾರ್ಯಕ್ರಮವೊಂದರಲ್ಲಿ ಕತ್ತಿಯಿಂದ ಆತ್ಮರಕ್ಷಣೆ ತರಬೇತಿಯನ್ನೂ ನೀಡಲಾಗಿತ್ತು. ಆದರೆ ಕೋಕ್ಸ್ ಹತ್ಯೆ ವಿಚಾರದಲ್ಲಿ ಅದು ಇಲ್ಲಿಯ ತನಕ ಏನೂ ಹೇಳಿಲ್ಲ.
ಈ ಹತ್ಯೆಯ ಸಂಬಂಧ ಬಂಧಿಸಲಾಗಿರುವ 52 ವರ್ಷದ ಟಾಮಿ ಮೈರ್ ಇಂಗ್ಲೆಂಡಿನ ಬಿರ್ ಸ್ಟಲ್‌ಲ್ನ ಫೀಲ್ಡ್ ಹೆಡ್ ಎಸ್ಟೇಟ್ವಿಳಾಸ ನೀಡಿದ್ದು ಕೋಕ್ಸ್ ಹತ್ಯೆಗೀಡಾದ ಸ್ಥಳದ ಹತ್ತಿರದಲ್ಲೇಈ ಎಸ್ಟೇಟ್ ಇದೆ.
ಬಂಧನಕ್ಕೀಡಾದ ಮೈರ್ ನ ಸಂಬಂಧಿ ಡುವೇನ್ ಸೈಂಟ್ ಲೂವಿಸ್ ಹೇಳುವಂತೆ ಆತನಿಗೆ ಅಂತಹಪ್ರಬಲ ರಾಜಕೀಯ ನಿಲುವುಗಳೇನಿರಲಿಲ್ಲ.







